ಉಡುಪಿ|ರೈಲಿನಲ್ಲಿ ಚಾಕಲೇಟ್ ತಿನ್ನಿಸಿ ನಗ ನಗದು ಕಳವು: ಪ್ರಕರಣ ದಾಖಲು

ಬೈಂದೂರು, ಆ.20: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಚಾಕಲೇಟ್ ನೀಡಿ ಅಮಲೇರಿಸಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಹರೀಶ್ ಬಂಟ್ವಾಳ ಎಂಬವರು ಎ.9ರಂದು ಕಾರವಾರದಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಈ ವೇಳೆ ಸುಮಾರು 35 ವರ್ಷದ ವ್ಯಕ್ತಿ ಭಟ್ಕಳ ನಂತರ ಸಂಜೆ ವೇಳೆ ಹರೀಶ್ ಬಂಟ್ವಾಳ ಎಂಬವರಿಗೆ ಚಾಕಲೆಟ್ ನೀಡಿದ್ದರು.
ಅದನ್ನು ತಿಂದ ಹರೀಶ್‌ಗೆ ಅಮಲಾಗಿ ಅಲ್ಲೇ ನಿದ್ದೆ ಬಂತ್ತೆನ್ನಲಾಗಿದೆ. ಎ.10ರಂದು ಬೆಳಿಗ್ಗೆ ಎಚ್ಚರಗೊಂಡು ನೋಡು ವಾಗ ಮೈಮೇಲೆ ಧರಿಸಿದ್ದ ಕುತ್ತಿಗೆಯಲ್ಲಿದ್ದ 2,35,000ರೂ. ಮೌಲ್ಯದ 28 ಗ್ರಾಂ ತೂಕದ ಸರ, 70,000ರೂ. ಮೌಲ್ಯದ 8 ಗ್ರಾಂ ತೂಕದ ಉಂಗುರ, 3500ರೂ. ಮೌಲ್ಯದ ವಾಚ್, 28ಸಾವಿರ ರೂ. ಮೌಲ್ಯದ ಮೊಬೈಲ್, ಜೇಬಿನಲ್ಲಿದ್ದ 5000ರೂ. ನಗದು ಮತ್ತು ಬ್ಯಾಗಿನಲ್ಲಿದ್ದ 1,45,000ರೂ. ನಗದು ಕಳವಾಗಿತ್ತೆನ್ನಲಾಗಿದೆ. ಇವುಗಳ ಒಟ್ಟು ಮೌಲ್ಯ 4,86,500ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





