ಉಡುಪಿ | ಸಿಬಿಎಸ್ಸಿ ಪರೀಕ್ಷೆ : ನುಝಾ ಫಾತಿಮಾ ಸರ್ಫರಾಝ್‌ಗೆ ಶೇ.95 ಅಂಕ

ಉಡುಪಿ: ಇತ್ತೀಚಿಗೆ ಪ್ರಕಟವಾದ ಸಿಬಿಎಸ್ಸಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉಡುಪಿಯ ಬ್ರಹ್ಮಾವರದ ಜಿ.ಎಂ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ನುಝಾ ಫಾತಿಮಾ ಸರ್ಫರಾಝ್ ಅವರು ಶೇ.95ರಷ್ಟು ಅಂಕ ಪಡೆದು ಉತ್ತಮ ಸಾಧನೆಗೈದಿದ್ದಾರೆ.
ಇವರು ಸರ್ಫರಾಝ್ ಟಿ.ಎಸ್. ಮತ್ತು ಫರ್ಝಾನಾ ಸರ್ಫರಾಝ್ ಅವರ ಪುತ್ರಿ ಹಾಗೂ ಕೋಡಿಬೆಂಗ್ರೆಯ ದಿವಂಗತ ಟಿ.ಎಸ್.ಇಸ್ಮಾಯಿಲ್ ಸಾಹೇಬ್ ಮತ್ತು ಸಬೀರಾ ಇಸ್ಮಾಯಿಲ್ ರವರ ಮೊಮ್ಮಗಳಾದ ನುಝಾ ಫಾತಿಮಾ ಸರ್ಫರಾಝ್ ಅವರು ಮೇ 13 ರಂದು ಪ್ರಕಟನೆಗೊಂಡ ಸಿಬಿಎಸ್ಸಿ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ.95ರಷ್ಟು ಅಂಕಗಳನ್ನು ಗಳಿಸಿದ್ದಾರೆ.
Next Story





