ಉಡುಪಿ| ಎಸ್ಐಆರ್ ನೆಪದಲ್ಲಿ ಬಂದು ಸರ ಅಪಹರಣ: ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಉಡುಪಿ, ಅ.8: ಎಸ್ಐಆರ್ ಕುರಿತು ಮಾಹಿತಿ ಕೇಳಿ ಅಪರಿಚಿತ ಇಬ್ಬರು ಮಹಿಳೆಯ ಸರ ಎಳೆದುಕೊಂಡು ಓಡಿದ ಘಟನೆ ನಿಟ್ಟೂರಿನಲ್ಲಿ ನಡೆದಿದೆ.
ಅ.7ರಂದು ಸಂಜೆ 3:45ರ ಸುಮಾರಿಗೆ ಪುತ್ತೂರು ಗ್ರಾಮದ ನಿಟ್ಟೂರಿನ ಮನೆಯೊಂದಕ್ಕೆ ಬಂದ ಅಪರಿಚಿತ ವ್ಯಕ್ತಿಗಳಿಬ್ಬರು ಮನೆಯಲ್ಲಿ ಒಬ್ಬರೇ ಇದ್ದ ಶಾಂತ ಕಾರಂತ (74)ರ ಬಳಿ ಮಾತನಾಡಿ ಕಾಗದಕ್ಕೆ ಸಹಿ ಹಾಕಲು ಒಳಗೆ ಹೋದಾಗ ಹಿಂಬಾಲಿಸಿಕೊಂಡು ಬಂದು ಶಾಂತ ಕಾರಂತರನ್ನು ದೂಡಿ ಅವರ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರವನ್ನು ಬಲಾತ್ಕಾರವಾಗಿ ಎಳೆದುಕೊಂಡು ಓಡಿ ಹೋಗಿರುವುದಾಗಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




