ಉಡುಪಿ | ಬಾರಾಡಿ ಕ್ರಾಸ್‌ನಲ್ಲಿ ತನಿಖಾ ಠಾಣೆ(ಚೆಕ್ ಪೋಸ್ಟ್) ಉದ್ಘಾಟನೆ

ಉಡುಪಿ, ಡಿ.12: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂತಾವರ ಗ್ರಾಮದ ಬಾರಾಡಿ ಕ್ರಾಸ್ ಎಂಬಲ್ಲಿ ಪೊಲೀಸ್ ಇಲಾಖೆಯ ಉಪಯೋಗಕ್ಕಾಗಿ ನಿರ್ಮಿಸಲಾದ ತನಿಖಾ ಠಾಣೆ(ಚೆಕ್ ಪೋಸ್ಟ್)ವನ್ನು ಶುಕ್ರವಾರ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷ ಪ್ರಿಯಂವದಾ ಉದ್ಘಾಟಿಸಿದರು.
ಕಾರ್ಕಳ ರಶ್ವಿ ಕನ್ಸ್ಟ್ರಕ್ಷನ್ ಮಾಲಕ ವಿನಿಶ್ ತನ್ನ ಮಾವ ದಿ.ಡಿ.ಆರ್. ರಾಜು ಇವರ ಸ್ಮರಣಾರ್ಥವಾಗಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತ ತನಿಖಾ ಠಾಣೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್, ರೋಟರಿ ಕ್ಲಬ್ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ ಹಾಗೂ ಇತರ ಸಾರ್ವಜನಿಕರು ಸಹಕರಿಸಿದರು. ಈ ತನಿಖಾ ಠಾಣೆಯನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು.
Next Story





