ಉಡುಪಿ | ಸಂವಿಧಾನ ಅರ್ಪಣಾ ದಿನಾಚರಣೆ-ಭೀಮರತ್ನ ರಾಜ್ಯ ಪ್ರಶಸ್ತಿ ಪ್ರದಾನ

ಉಡುಪಿ, ಜ.26: ಕರ್ನಾಟಕ ದಲಿತ ಸಂಘರ್ಷ ಸಮಿತಿ- ಭೀಮ ಘರ್ಜನೆ ರಾಜ್ಯ ಸಮಿತಿಯ ವತಿಯಿಂದ 77ನೇ ಸಂವಿಧಾನ ಅರ್ಪಣ ದಿನವನ್ನು ಉಡುಪಿ ಬನ್ನಂಜೆಯ ನಾರಾಯಣಗುರು ಆಡಿಟೋರಿಯಂನಲ್ಲಿ ರವಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ವಕೀಲ ರವಿಕಿರಣ್ ಮುರುಡೇಶ್ವರ ಕುಂದಾಪುರ ಉದ್ಘಾಟಿಸಿದರು. ಸಮಾಜ ಸೇವಕ ನಿಂಗರಾಜು ಮೈಸೂರು, ಕಲಾ ಸಾಧಕ ಸಿದ್ದು ಮೇಲಿನಮನೆ, ಸಮಾಜ ಸೇವಕ ಎಂ.ನಿತ್ಯಾನಂದ ತೆಕ್ಕಟ್ಟೆ, ನಿವೃತ್ತ ದೈಹಿಕ ಶಿಕ್ಷಕ ಗೋವಿಂದ ಎಚ್.ನಾಯ್ಕ, ನೀಲಿ ಸೈನ್ಯ ಕಮಾಂಡರ್ ಹಾಗೂ ಎಸೆಸೆಲ್ಸಿ ಗಣಿತದಲ್ಲಿ 100 ಅಂಕ ಪಡೆದ ವಿದ್ಯಾರ್ಥಿಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೀಮರತ್ನ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ತಲ್ಲೂರು ಕೋಟೆಬಾಗಿನ ಅಂಗನವಾಡಿ ಪುಟಾಣಿಗಳಾದ ಶರೀಕ್ಷ ಮತ್ತು ಅನೀಶ್ ಕುಮಾರ್ ಅಂಬೇಡ್ಕರ್ ಕುರಿತು ಭಾಷಣ ಮಾಡಿದರು. ಬಸ್ರೂರು ಶಾರದ ಕಾಲೇಜಿನ ನಿವೃತ್ತ ಪ್ರಾಂಶು ಪಾಲ ಡಾ.ದಿನೇಶ್ ಹೆಗ್ಡೆ, ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ಕೆ.ಪ್ರೇಮಾನಂದ, ಕುಂದಾಪುರ ಪುರಸಭೆಯ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಪ್ರಭಾಕರ್ ವಿ. ಮುಖ್ಯ ಅತಿಥಿಗಳಾಗಿದ್ದರು.
ಸಂಚಾಲಕರಾಗಿ ಈರಣ್ಣ ದಶರಥ್(ಬಾಗಲಕೋಟ), ದೇವರಾಜ್ (ಹೊಸಪೇಟೆ), ಮಂಗಳೂರು ಜಿಲ್ಲಾ ಸಂಚಾಲಕ ಸತೀಶ್(ಮೂಡುಬಿದ್ರೆ) ಹಾಗೂ ಬಳ್ಳಾರಿ ಜಿಲ್ಲಾ ಸಂಚಾಲಕ ಹುಲಗಪ್ಪ ಕಪಗಲ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸಂಸ್ಥಾಪಕ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ವಹಿಸಿದ್ದರು.
ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು ಸ್ವಾಗತಿಸಿದರು. ರಾಜ್ಯ ಸಂಚಾಲಕ ದಲಿತ ಕಲಾಮಂಡಳಿ ಸಿದ್ದು ಮೇಲಿನಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಲತಾ ಬಜಗೋಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಉಡುಪಿಯ ತಾಪಂ ಕಚೇರಿಯಿಂದ ಗೌತಮ್ ತಲ್ಲೂರು ಹಾಗೂ ಗಗನ್ ತಲ್ಲೂರು ನೇತೃತ್ವದಲ್ಲಿ ನಡೆದ ನೀಲಿ ಭೀಮ ಸೈನ್ಯದ ಪಥಸಂಚಲನಕ್ಕೆ ಉದಯ್ ಕುಮಾರ್ ತಲ್ಲೂರು ಚಾಲನೆ ನೀಡಿದರು. ಪಥಸಂಚಲನವು ಉಡುಪಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಾಗಿ ಸಾಗುತ್ತ ನಾರಾಯಣಗುರು ಆಡಿಟೋರಿಯಂನಲ್ಲಿ ಸಮಾಪ್ತಿಗೊಂಡಿತು.







