ಉಡುಪಿ | ಬಂದರು ಭೂಮಿ ಅಕ್ರಮ ಗುತ್ತಿಗೆ ಆರೋಪ : ಸಿಪಿಎಂ ಖಂಡನೆ

ಉಡುಪಿ, ನ.16: ಮಲ್ಪೆಯ ಸೀ ವಾಕ್ನಲ್ಲಿರುವ ಸರಕಾರಿ ಬಂದರಿನ 37554.55 ಚದರ ಮೀಟರ್ ವಿಸ್ತೀರ್ಣದ ಭೂಮಿಯನ್ನು ಶಾಸಕ ಯಶ್ಪಾಲ್ ಸುವರ್ಣ ದಕ್ಷಿಣ ಕನ್ನಡದ ಮೀನುಗಾರಿಕಾ ಫೆಡರೇಶನ್ ಹೆಸರಿನಲ್ಲಿ ನಿರ್ದೇಶಕರು ಹಾಗೂ ಸಾರ್ವಜನಿಕರ ಗಮನಕ್ಕೆ ತಾರದೇ ಅಕ್ರಮ ಒಳ ಒಪ್ಪಂದ ಮಾಡಿ ವಂಚಿಸಿರುವುದು ಖಂಡನೀಯ ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ತಿಳಿಸಿದೆ.
ಈ ಪ್ರದೇಶವು ಮಲ್ಪೆಯ ಸಾರ್ವಜನಿಕರ ಅನುಕೂಲಕ್ಕೆ ಬಳಕೆಯಾಗ ಬೇಕು. ಮಲ್ಪೆ ಸಾರ್ವಜನಿಕರು ಶಾಸಕರ ಮನೆಗೆ ಮುತ್ತಿಗೆ ಹಾಕಿ ಈ ಜಾಗದಲ್ಲಿ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸಬೇಕೆಂಬ ಬೇಡಿಕೆಯನ್ನು ಸಿಪಿಎಂ ಬೆಂಬಲಿಸುತ್ತದೆ. ಕರ್ನಾಟಕ ಸರಕಾರ ಈ ಒಪ್ಪಿಗೆ ಪತ್ರವನ್ನು ರದ್ದು ಪಡಿಸಬೇಕು ಎಂದು ಉಡುಪಿ ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





