ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದ ಸಭೆ

ಉಡುಪಿ : ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದ ಸಭೆಯು ಉಡುಪಿಯ ಪಕ್ಷದ ಕಚೇರಿಯಲ್ಲಿ ರವಿವಾರ ಜರಗಿತು.
ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಯೋಗೀಶ್ ವಿ.ಶೆಟ್ಟಿ, ಪಕ್ಷದ ತತ್ವ ಸಿದ್ಧಾಂತದ ಬಗ್ಗೆ ಮಾಹಿತಿ ನೀಡಿ, ಪಕ್ಷದ ಇತಿಹಾಸ, ತತ್ವಸಿದ್ಧಾಂತಗಳು ಹಾಗೂ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಪಕ್ಷದ ಪಾತ್ರದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಜ್ಯೋತಿ ಅಶೋಕ್, ಕಾಶಿನಾಥ್, ಬಸವರಾಜ್, ದೇವರಾಜ್, ಅಶೋಕ, ಹಲನ್, ಪ್ರಶಾಂತ್ ಪೂಜಾರಿ, ಮಹೇಶ್ ಪೂಜಾರಿ, ಬಲಭೀಮರಾಯ ಪಕ್ಷ ಸೇರ್ಪಡೆಗೊಂಡರು.
ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಯ ಪೂಜಾರಿ, ಜಿಲ್ಲಾ ಕಾರ್ಯಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ರಾಜ್ಯ ನಾಯಕರಾದ ದಕ್ಷಿತ ಆರ್. ಶೆಟ್ಟಿ, ಗಂಗಾಧರ ಬಿರ್ತಿ, ದಕ್ಷಿಣಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೇಶ್ ಶೆಟ್ಟಿ ಜಪ್ಪು, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಜಯ್ ಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಾಲಿನಿ ಆರ್.ಶೆಟ್ಟಿ ಕೆಂಚನೂರು, ಕಾರ್ಯಾಧ್ಯಕ್ಷ ಅನಸೂಯಾ ಶೆಟ್ಟಿ, ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ದೇವರಾಜ ತೊಟ್ಟಂ, ರಾಮರಾವ್, ಹರಿಣಾಕ್ಷಿ, ಮೋಹಿನಿ ಎಸ್, ರಂಗ ಆರ್. ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.






