ಕ್ರಿಸ್ಮಸ್ ಆಚರಣೆಗೆ ಅಡ್ಡಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡನೆ

ಉಡುಪಿ: ಕ್ರಿಸ್ಮಸ್ ಆಚರಣೆ ಸಂದರ್ಭದಲ್ಲಿ ಹಾಗೂ ಕ್ರೈಸ್ತ ಸಮುದಾಯದ ಸಂಸ್ಥೆಗಳ ಮೇಲೆ ನಡೆಸಲಾದ ದಾಳಿಗಳು ದೇಶದ ಸಂವಿಧಾನ ಮತ್ತು ನಾಗರಿಕ ವ್ಯವಸ್ಥೆಯ ಮೇಲೆ ನಡೆಸಿದ ದಾಳಿಗಳಾಗಿವೆ. ಈ ದ್ವೇಷದ ದಾಳಿಗಳನ್ನು ಖಂಡಿಸುವುದಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಹೇಳಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಧ್ಯಮ ವಕ್ತಾರ ಇಕ್ಬಾಲ್ ಮನ್ನಾ, ದೇಶದ ಸಂವಿಧಾನವು ದೇಶದ ಎಲ್ಲಾ ಪ್ರಜೆಗಳಿಗೆ ಅವರ ಧಾರ್ಮಿಕ ನಂಬಿಕೆಯಂತೆ ಬದುಕುವ, ಆಚರಣೆಗಳನ್ನು ಪಾಲಿಸುವ ಸ್ವಾತಂತ್ರ್ಯ ನೀಡಿದೆ. ಎಲ್ಲರನ್ನೂ ಒಳಗೊಳ್ಳುವ ಈ ಸ್ವಾತಂತ್ರ್ಯ ಯಾವುದೇ ದೇಶದ ಘನತೆ, ಗೌರವ ಮತ್ತು ನಾಗರಿಕ ಸಮಾಜವಾಗಿ ಆ ದೇಶ ಮುನ್ನಡೆಯುತ್ತಿರುವ ಸಂಕೇತವೂ ಆಗಿದೆ. ಆದರೆ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ದೇಶದ ಘನತೆಗೆ ಮಸಿ ಬಳಿಯುತ್ತಿರುವುದಲ್ಲದೆ ಆಂತರಿಕವಾಗಿ ವಿಭಾಜಕ ಮಾನಸಿಕತೆಯನ್ನು ಬೆಳೆಸುತ್ತಿದೆ ಎಂದು ಹೇಳಿದ್ದಾರೆ.
Next Story





