ನ.24ರಂದು ಉಸ್ತುವಾರಿ ಸಚಿವರಿಂದ ಉಡುಪಿ ಜಿಲ್ಲಾ ಪ್ರವಾಸ

ಉಡುಪಿ, ನ.21:ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಝ್ವಾನ್ ಅರ್ಷದ್ ಅವರು ನ.23 ಮತ್ತು 24ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ನ.23ರ ರಾತ್ರಿ 8:50ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 9:50 ಮಂಗಳೂರಿಗೆ ಆಗಮಿಸುವ ಸಚಿವರು ಮಂಗಳೂರಿನಲ್ಲಿ ವಾಸ್ತವ್ಯ ಮಾಡುವರು. ನ.24ರ ಮಂಗಳವಾರ ಬೆಳಗ್ಗೆ 9:30ಕ್ಕೆ ಕಾಪು ವಿಧಾನಸಭಾ ಕ್ಷೇತ್ರದ ಬೈರಂಪಳ್ಳಿಗೆ ಆಗಮಿಸುವ ಸಚಿವರು ಅಲ್ಲಿ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು.
ಬೆಳಗ್ಗೆ 10:30ಕ್ಕೆ ಉಡುಪಿಗೆ ಆಗಮಿಸುವ ಸಚಿವ ರಿಝ್ವಾನ್, ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಭಾಗವಹಿಸಿ ಕಾರ್ಕಳಕ್ಕೆ ತೆರಳುವರು. ಅಪರಾಹ್ನ 3 ಕ್ಕೆ ಕಾರ್ಕಳದ ಮಂಜುನಾಥ ಪೈ ಸಭಾಭವನದಲ್ಲಿ ತಾಲೂಕು ಮಟ್ಟದ ಪ್ರಜಾಸೇವೆ ಅಭಿಯಾನದಲ್ಲಿ ಭಾಗವಹಿಸುವರು.
ಸಂಜೆ 4:30ಕ್ಕೆ 2027ರ ಫೆಬ್ರವರಿ ತಿಂಗಳಲ್ಲಿ ನಡೆಯುವ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಕಚೇರಿಗೆ ಭೇಟಿ ನೀಡುವರು. 5:00ಗಂಟೆಗೆ ಕಾರ್ಕಳ ಬಂಗ್ಲೆಗುಡ್ಡೆಯಲ್ಲಿ ನಗರೋತ್ಥಾನ ಯೋಜನೆ ಯಡಿ ನಿರ್ಮಿಸಲಾಗಿರುವ ಸಭಾಭವನವನ್ನು ಉದ್ಘಾಟಿಸುವರು. 5:30ಕ್ಕೆ ಕಾರ್ಕಳದಿಂದ ಮಂಗಳೂರಿಗೆ ತೆರಳುವರು.






