ಉಡುಪಿ | ಇಂಜಿನಿಯರ್ಸ್ ಸಮ್ಮಿಲನ ಕಾರ್ಯಕ್ರಮ

ಉಡುಪಿ, ಡಿ.3: ಉಡುಪಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ವತಿಯಿಂದ ಇಂಜಿನಿಯರ್ಸ್ ಸಮ್ಮಿಲನ ಕಾರ್ಯಕ್ರಮ ಡಿ.1ರಂದು ಉಡುಪಿ ಕಿದಿಯೂರು ಹೋಟೆಲಿನ ಅನಂತಶಯನ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಸಫಾರ್ ಕೋಟ್ಸ್ ನ ಪ್ರಾದೇಶಿಕ ವ್ಯವಸ್ಥಾಪಕ ಶ್ರೀರಾಮಚರಣ ರೈ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕೆ.ರಂಜನ್ ವಹಿಸಿದ್ದರು. ಉಪಾಧ್ಯಕ್ಷರಾದ ಇಂಜಿನಿಯರ್ ಭರತ್ ಭೂಷಣ್ ಹಾಗೂ ಇಂಜಿನಿಯರ್ ಗಣೇಶ್ ಬೈಲೂರು, ಖಜಾಂಜಿ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಹರೀಶ್ ವಂದಿಸಿದರು. ಸ್ವಾತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್, ರಾಘವೇಂದ್ರ ಸಹಕರಿಸಿದರು.
Next Story





