ಉಡುಪಿ | ಕೊಳಂಬೆ ಮದೀನ ಮಸೀದಿ ಅಧ್ಯಕ್ಷರಾಗಿ ಫಿರೋಝ್ ಅಹ್ಮದ್ ಆಯ್ಕೆ
ಉಡುಪಿ, ನ.30: ಉಡುಪಿ ಶಾಂತಿನಗರ ಕೊಳಂಬೆಯ ಮದೀನ ಮಸೀದಿಯ ಆಡಳಿತ ಕಮಿಟಿಯ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಎಸ್.ಎ.ಶಮೀಮ್, ಅಧ್ಯಕ್ಷರಾಗಿ ಫಿರೋಝ್ ಅಹ್ಮದ್, ಉಪಾಧ್ಯಕ್ಷರಾಗಿ ಶಮೂನ್ ಅಹ್ಮದ್, ಕಾರ್ಯದರ್ಶಿಯಾಗಿ ಮುಹಮ್ಮದ್ ಶಫೀರ್, ಜತೆ ಕಾರ್ಯದರ್ಶಿಯಾಗಿ ಝಕೀರ್ ಹುಸೇನ್, ಕೋಶಾಧಿಕಾರಿಯಾಗಿ ಅಲ್ಫಾಝ್ ಅಬ್ದುಲ್ ಘನಿ, ಜತೆ ಕೋಶಾಧಿಕಾರಿಯಾಗಿ ಸಫ್ವಾನ್ ಅಹ್ಮದ್ ಆಯ್ಕೆಯಾದರು.
ಸದಸ್ಯರುಗಳಾಗಿ ಯಾಸೀನ್ ಚಾಂದ್ ಸಾಹೇಬ್, ರೆಹಮತ್ ಅಬ್ದುಲ್ ಖಾದರ್, ಸಾಧಿಕ್ ಯುಸೂಫ್, ಇರ್ಷಾದ್ ಬಾಬುಲಾಲ್, ನಯಾಝ್ ಅನ್ವರ್ ಅವರನ್ನು ಆಯ್ಕೆ ಮಾಡಲಾಯಿತು.
Next Story





