ಉಡುಪಿ ಜಯಂಟ್ಸ್ ಗೆ ಹಲವು ಪ್ರಶಸ್ತಿ

ಉಡುಪಿ, ನ.15: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಫೆಡರೇಶನ್ ಆರನೇ ಸಮ್ಮೇಳನದಲ್ಲಿ ಜಯಂಟ್ಸ್ ಗ್ರೂಪ್ ಆಫ್ ಉಡುಪಿ 12 ಪ್ರಶಸ್ತಿ ಹಾಗೂ ಎರಡು ಪ್ರಮಾಣಪತ್ರಗಳನ್ನು ಗಳಿಸಿದೆ.
ಅತ್ಯುತ್ತಮ ಸಮಾಜ ಸೇವೆಯ ಮೂಲಕ ಜನರ ಮೆಚ್ಚುಗೆ ಗಳಿಸಿರುವ ಜಯಂಟ್ಸ್ ಗ್ರೂಪ್ ಆಫ್ ಉಡುಪಿ ತನ್ನ ಸಾಮಾಜಿಕ ಸೇವೆಯಲ್ಲಿ ಉತ್ತಮ ಪಾತ್ರ ವಹಿಸಿದೆ.
ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಡುಪಿಯಿಂದ ದಿನಕರ್ ಅಮೀನ್, ತೆಜೇಶ್ವರ್ ರಾವ್, ದಿವಾಕರ್ ಪೂಜಾರಿ ಹಾಗೂ ವಾದಿರಾಜ್ ಸಾಲ್ಯಾನ್ ಉಪಸ್ಥಿತರಿದ್ದರು.
Next Story





