Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿ| ಹೊಸಾಳ ಸೀತಾನದಿಯಲ್ಲಿ ಅಕ್ರಮ...

ಉಡುಪಿ| ಹೊಸಾಳ ಸೀತಾನದಿಯಲ್ಲಿ ಅಕ್ರಮ ಮರಳುಗಾರಿಕೆ: ಗ್ರಾಮಸ್ಥರ ಆರೋಪ

► ಎ.13ರಿಂದ ಜಿಲ್ಲಾಡಳಿತದ ವಿರುದ್ಧ ಹೋರಾಟಕ್ಕೆ ಸಜ್ಜು ► ಬಾವಿಗಳ ನೀರೆಲ್ಲಾ ಉಪ್ಪು, ಕೃಷಿ ಭೂಮಿಗೆ ಹಾನಿ ► ಭೂಸವಕಳಿಯ ಭೀತಿ, ಶಾಲಾ ಮಕ್ಕಳಿಗೆ ತೊಂದರೆ

ವಾರ್ತಾಭಾರತಿವಾರ್ತಾಭಾರತಿ11 April 2026 8:25 PM IST
share
ಉಡುಪಿ| ಹೊಸಾಳ ಸೀತಾನದಿಯಲ್ಲಿ ಅಕ್ರಮ ಮರಳುಗಾರಿಕೆ: ಗ್ರಾಮಸ್ಥರ ಆರೋಪ

ಉಡುಪಿ, ಎ.11: ಬ್ರಹ್ಮಾವರ ತಾಲೂಕಿನ ಬಾರಕೂರು ಸಮೀಪದ ಹೊಸಾಳ ಗ್ರಾಮ ನಾಗರಮಠದ ಸೀತಾನದಿ ಯಲ್ಲಿ ಅಕ್ರಮ ಮರಳುಗಾರಿಕೆಗೆ ಅನುಮತಿ ನೀಡುವ ಮೂಲಕ ಜಿಲ್ಲಾಡಳಿತ, ಗ್ರಾಮಸ್ಥರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವುದು ಮಾತ್ರವಲ್ಲದೇ, ಇಲ್ಲಿ ಮರಳುಗಾರಿಕೆಯ ಅವ್ಯವಹಾರದಲ್ಲಿ ಸ್ವತಹ ಶಾಮೀಲಾಗಿರುವ ಶಂಕೆಯು ವ್ಯಕ್ತವಾಗುತ್ತಿದೆ ಎಂದು ಸಂತ್ರಸ್ಥ ಗ್ರಾಮಸ್ಥರ ಪರವಾಗಿ ಹೋರಾಟಗಾರ ದಿನೇಶ್ ಗಾಣಿಗ ಆರೋಪಿಸಿದ್ದಾರೆ.

ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಸಾಳ ಗ್ರಾಮ ನಾಗರಮಠದ ಸೀತಾನದಿ ಪಾತ್ರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇ-ಟೆಂಡರ್ ಮೂಲಕ ಡಿಎಸ್‌ಬಿ-5ರಲ್ಲಿ 1,13,736 ಮೆಟ್ರಿಕ್ ಟನ್ ಹಾಗೂ ಕೆಆರ್‌ಡಿಎಲ್ ಡಿಎಸ್‌ಬಿ-1ರ ಮುಖಾಂತರ 18,790 ಮೆಟ್ರಿಕ್ ಟನ್ ಸೇರಿ ಒಟ್ಟು ಸುಮಾರು 1.50 ಲಕ್ಷ ಮೆಟ್ರಿಕ್ ಟನ್ ಮರಳು ತೆಗೆಯಲು ಅವಕಾಶ ನೀಡಿದೆ ಎಂದವರು ವಿವರಿಸಿದರು.

ಈ ಪ್ರದೇಶದಲ್ಲಿ ಯಾವುದೇ ವೈಜ್ಞಾನಿಕ ಸರ್ವೆ ನಡೆಸದೇ ಇಲ್ಲಿ ತೆಗೆಯುವ ಮರಳಿನ ಪ್ರಮಾಣವನ್ನು ನಿರ್ಧರಿಸಿ ದ್ದಾರೆ. ಗ್ರಾಮಸ್ಥರು ಮಣಿಪಾಲ ಎಂಐಟಿಯ ತಜ್ಞ ಭೂವಿಜ್ಞಾನಿ (ನಿವೃತ್ತ) ಡಾ.ಉದಯಶಂಕರ್ ಅವರಿಂದ ಸರ್ವೆ ನಡೆಸಿದಾಗ ಇಲ್ಲಿ ಗರಿಷ್ಠ 10,000 ಮೆಟ್ರಿಕ್ ಟನ್ ಮರಳು ಮಾತ್ರ ಲಭ್ಯವಿದೆ ಎಂದು ತಿಳಿಸಿದ್ದರು. ಆದರೆ ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೆ ಅವರು ಯಾವುದನ್ನೂ ಆಲಿಸುವ ತಾಳ್ಮೆಯನ್ನೇ ತೋರಿಸದೇ ಅತ್ಯಂತ ಒರಟಾಗಿ ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಿ ಎಂದು ಗ್ರಾಮಸ್ಥರ ಮಾತನ್ನು ಆಲಿಸಲು ನಿರಾಕರಿಸುತ್ತಾರೆ ಎಂದರು.

2024ರ ಜ.18ರಂದು ಇಲ್ಲಿನ ಸ.ನಂ.91ರಲ್ಲಿ ಆರು ಎಕರೆ ಪ್ರದೇಶಕ್ಕೆ ಇ-ಟೆಂಡರ್ ಕರೆಯಲಾಗಿತ್ತು. 15 ಮಂದಿ ಬಿಡ್ ಮಾಡಿದ್ದು, ಇವರಲ್ಲಿ ನವೆಂಬರ್ ತಿಂಗಳಲ್ಲಿ ಬಿ.ಕುಶಕುಮಾರ್ ಎಂಬವರಿಗೆ ಬಿಡ್ಡುದಾರ ಎಂದು ಆಶಯಪತ್ರ ನೀಡಲಾಗಿತ್ತು.ಆದರೆ ಕುಶಕುಮಾರ್ ಅವರಿಗೆ ಮೂರೇ ತಿಂಗಳಲ್ಲಿ ಜಿಲ್ಲಾಧಿಕಾರಿಗಳು ಮತ್ತೊಂದು ತಿದ್ದುಪಡಿ ಆಶಯ ಪತ್ರ ನೀಡಿ ಸ.ನಂ.91ರ ಬದಲು ಸ.ನಂ.114 ಮತ್ತು 140ರಲ್ಲಿ 8.90 ಎಕರೆ ಎಂದು ಬದಲಾವಣೆ ಮಾಡಿಕೊಟ್ಟಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ ಎಂದು ದಿನೇಶ್ ಗಾಣಿಗ ತಿಳಿಸಿದರು.

ಬಿಡ್ಡುದಾರರಿಗೆ ನೀಡಿದ ಪರಿಸರ ವಿಮೋಚನಾ ಪತ್ರದಲ್ಲಿ ಒಂದು ಮೀ. ಒಳಗಿನ ಮರಳನ್ನು ಮಾತ್ರ ತೆರವು ಮಾಡಲು ಆದೇಶವಿತ್ತು. ಆದರೆ ಇಲ್ಲಿ 3ಮೀ., 4ಮೀ. ಆಳಕ್ಕೆ ಮರಳನ್ನು ತೆಗೆಯಲಾಗುತ್ತಿದೆ. ಸೀತಾನದಿಗೆ ಹಾಕಿರುವ ಬೋಲ್‌ಪಾಯಿಂಟ್‌ನಲ್ಲಿ 2ರಿಂದ 6ಮೀ. ಆಳದಲ್ಲಿ ಮರಳು ಇದ್ದು, ಇದನ್ನು ತೆಗೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದವರು ಹೇಳಿದರು.

ಅಲ್ಲದೇ ಆದೇಶದಲ್ಲಿ ಭೂ ಸವಕಳಿ ಸ್ಥಳದಲ್ಲಿ ಮರಳುಗಾರಿಕೆ ಮಾಡಬಾರದೆಂಬ ಸೂಚನೆ ಇದ್ದರೂ, ಸೀತಾನದಿಯ ಎಡದಂಡೆಯಲ್ಲಿ ಕೃಷಿ ಭೂಮಿ ಹೊಳೆಗೆ ಕೊಚ್ಚಿಕೊಂಡು ಹೋಗಿವೆ. ಈ ಅಕ್ರಮ ಮರಳುಗಾರಿಕೆ ಯಿಂದ ಪರಿಸರದ 150ರಿಂದ 200 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇವರ ಅಕ್ರಮ ಮರಳುಗಾರಿಕೆಯಿಂದ ಪರಿಸರದ ಮನೆಯ ಬಾವಿಗಳಲ್ಲಿ ಉಪ್ಪು ನೀರು ತುಂಬಿದ್ದು ಕುಡಿಯುವುದು ಸೇರಿದಂತೆ ಬಳಕೆಗೆ ಅಯೋಗ್ಯವಾಗಿದೆ ಎಂದು ಗ್ರಾಮದ ಗಿರಿಜಾ ರಂಗ ಮರಕಾಲ ದೂರಿದರು.

ನೂರಾರು ಕಾರ್ಮಿಕರ ಬಳಕೆ: ಇಲ್ಲಿ ಸಾಂಪ್ರದಾಯಿಕ ದೋಣಿಯಲ್ಲಿ 30 ಮಂದಿ ಕಾರ್ಮಿಕರನ್ನು ಬಳಸಿ ಮರಳು ಗಾರಿಕೆ ಮಾಡಲು ಅನುಮತಿ ಇದ್ದರೂ, ಇಲ್ಲಿ ಗುತ್ತಿಗೆದಾರರು ದೊಡ್ಡದೊಡ್ಡ 40ರಿಂದ 50 ದೋಣಿಗಳನ್ನು 150ಕ್ಕೂ ಅಧಿಕ ಕಾರ್ಮಿಕರನ್ನು ಬಳಸಿ ಮರಳುಗಾರಿಕೆ ಮಾಡಲಾಗುತ್ತಿದೆ. ಹೊಳೆಬದಿಯಲ್ಲಿ ಕೆಂಪು ಮಣ್ಣು ತುಂಬಿಸಿ ಯಾರ್ಡ್ ಮಾಡಿದ್ದು ಕಾನೂನು ಬಾಹಿರ ಎಂದು ಹೋರಾಟಗಾರ ಚಂದ್ರ ಕಾಂಚನ್ ಆರೋಪಿಸಿದರು.

ಇಲ್ಲಿ ಆಳದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವುದರಿಂದ ಕೇಂದ್ರ ಸರಕಾರದ ಜಲಜೀವನ್ ಮಿಷನ್‌ನಡಿ ಸುಮಾರು 1.50ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಬಾವಿಯಲ್ಲಿ ಉಪ್ರು ನೀರು ಬರುತ್ತಿದೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದವರು ದೂರಿದರು.

ಪೊಲೀಸ್ ರಕ್ಷಣೆಯಲ್ಲಿ ಮರಳುಗಾರಿಕೆ: ನಾಗರಮಠದಲ್ಲಿ ಆರು ತಿಂಗಳ ಹಿಂದೆ ಮರಳುಗಾರಿಕೆಗೆ ಪ್ರಯತ್ನ ನಡೆದಾಗ ಗ್ರಾಮಸ್ಥರ ತೀವ್ರ ಪ್ರತಿಭಟನೆ ಯಿಂದ ನಿಲ್ಲಿಸಲಾಗಿತ್ತು. ಇದೀಗ 10ದಿನಗಳಲ್ಲಿ ಭಾರೀ ಪೊಲೀಸ್ ರಕ್ಷಣೆ ಯಲ್ಲಿ ಮರಳುಗಾರಿಕೆ ನಡೆಯುತ್ತಿದೆ. 150ಕ್ಕೂ ಹೆಚ್ಚು ಪೊಲೀಸರು ಇವರಿಗೆ ರಕ್ಷಣೆ ನೀಡುತಿದ್ದಾರೆ. ವಿರೋಧಿಸಿದ ಗ್ರಾಮಸ್ಥರು, ಮಹಿಳೆಯರು ವಿದ್ಯಾರ್ಥಿಗಳ ವಿರುದ್ಧ ಕೇಸು ಹಾಕಲಾಗುತ್ತಿದೆ ಎಂದು ಚಂದ್ರ ಕಾಂಚನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೃಷ್ಣ ಎನ್.ಬಂಗೇರಾ, ಗಿರಿಜಾ ರಂಗ ಮರಕಾಲ, ಆಶಾ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ

ಅಕ್ರಮ ಮರಳುಗಾರಿಕೆ ವಿರುದ್ಧ ನಾವು ಜಿಲ್ಲಾಧಿಕಾರಿಗಳಿಗೆ 10ಕ್ಕೂ ಅಧಿಕ ಮನವಿ ನೀಡಿದ್ದೇವೆ. ಆದರೆ ಅವರು ಒಂದಕ್ಕೂ ಕ್ರಮತೆಗೆದುಕೊಂಡಿಲ್ಲ. ನಮ್ಮ ದೂರನ್ನು ನಿರ್ಲಕ್ಷಿಸುತಿದ್ದಾರೆ. ಆದೇಶದಲ್ಲಿ ಕೇವಲ ಒಂದು ಮೀ. ಆಳದಲ್ಲಿ ಮರಳುಗಾರಿಕೆ ಅವಕಾಶವಿದ್ದರೂ ಇಲ್ಲಿ 3-4ಮೀ. ಅಳದಲ್ಲಿ ಮರಳು ತೆಗೆಯ ಲಾಗುತ್ತಿದೆ. ಇದರಿಂದ ಈ ಭಾಗದ ಅದೆಷ್ಟೋ ಕೃಷಿ ಭೂಮಿಗಳಿಗೆ ಹಾನಿ ಯಾಗಿದೆ. ಮನವಿ ಮಾಡಿದರೂ ಈವರೆಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿಲ್ಲ ಎಂದು ದಿನೇಶ್ ಗಾಣಿಗ ಹಾಗೂ ಚಂದ್ರ ಕಾಂಚನ್ ದೂರಿದರು.

ಇದಕ್ಕೆ ಬದಲು ಅಕ್ರಮ ಮರಳುಗಾರಿಕೆ ವಿರೋಧಿಸುವ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಾಗುತ್ತಿದೆ. ಹೀಗಾಗಿ ನಾವು ಗ್ರಾಮಸ್ಥರು ಒಟ್ಟಾಗಿ ಎ.13 ಮತ್ತು 14ರಂದು ಎರಡು ದಿನ ನಾಗರಮಠದ ಮರಳುಗಾರಿಕೆ ಪ್ರದೇಶದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ. ಬಳಿಕ 15ರಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದರು.

‘ಜಿಲ್ಲಾಧಿಕಾರಿಗಳು ಹೂಳೆತ್ತುವ ಹೆಸರಿನಲ್ಲಿ ಮರಳು ದಂಧೆ ಮಾಡುವವ ರಿಗೆ ಅವಕಾಶ ನೀಡಿದ್ದಾರೆ. ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿದರೆ ಕೋರ್ಟ್‌ಗೆ ಹೋಗಿ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಈ ಬಗ್ಗೆ ಸ್ಥಳೀಯರು ಸೇರಿ ಪ್ರತಿಭಟನೆ ಮಾಡಿದರೆ ಪೊಲೀಸ್ ಇಲಾಖೆ ಮೂಲಕ ಕೇಸ್ ಹಾಕಿಸುತ್ತಾರೆ. ಈ ಮೂಲಕ ಅಕ್ರಮ ಮರಳುಗಾರಿಕೆಗೆ ಜಿಲ್ಲಾಡಳಿತ ಕುಮ್ಮಕ್ಕು ನೀಡುತ್ತಿದ್ದು, ಕಾನೂನಿಗೆ ಯಾವುದೇ ಬೆಲೆ ಕೊಡುತ್ತಿಲ್ಲ. ಇದರ ವಿರುದ್ಧ ನಾವು ಲೋಕಾಯುಕ್ತಕ್ಕೂ ದೂರು ನೀಡಿದ್ದೇವೆ.

-ದಿನೇಶ್ ಗಾಣಿಗ, ಹೋರಾಟಗಾರ.



Tags

UdupiIllegalsandminingHosalSitanadiVillagers
share
ವಾರ್ತಾಭಾರತಿ
ವಾರ್ತಾಭಾರತಿ
Next Story
X