ಉಡುಪಿ: ಗೋಳಿಕಟ್ಟೆಯ ನೂತನ ಅಲ್ ಫಲಾಹ್ ಮಸೀದಿ ಉದ್ಘಾಟನೆ
► ಖಾಝಿಯಾಗಿ ಮಾಣಿ ಉಸ್ತಾದ್ ಅಧಿಕಾರ ಸ್ವೀಕಾರ ► ಸಾರ್ವಜನಿಕ ಮಸೀದಿ ಸಂದರ್ಶನ

ಉಡುಪಿ, ನ.4: ಹಾವಂಜೆ ಗೋಳಿಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾದ ಅಲ್ ಫಲಾಹ್ ಜುಮ್ಮಾ ಮಸೀದಿ ಬುಧವಾರ ಉದ್ಘಾಟನೆಗೊಂಡಿತು.
ಮಸೀದಿಯನ್ನು ಉಡುಪಿ ಜಿಲ್ಲಾ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸಿ, ವಕ್ಫ್ ಮಾಡಿದರು. ಇದೇ ಸಂದರ್ಭದಲ್ಲಿ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ ಮಾಣಿ ಉಸ್ತಾದ್ ಅವರನ್ನು ಮಸೀದಿ ವತಿಯಿಂದ ಗೌರವಿಸಲಾಯಿತು.
ಮಸೀದಿಯ ಖತೀಬ್ ಅಬ್ದುಲ್ ರಝಾಕ್ ಅಲ್ಮದನಿ ಅಲ್ ಪುರ್ಖಾನಿ ಪ್ರಭಾಷಣ ಮಾಡಿದರು. ಅದೇ ರೀತಿ ಮಸೀದಿ ನಿರ್ಮಾಣಕ್ಕೆ ಮುಂಚೂಣಿಯಲ್ಲಿ ಶ್ರಮಿಸಿದ ಹಬೀಬುಲ್ಲ ಗೋಳಿಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಬಶೀರ್ ಮದನಿ ಕಟಪಾಡಿ, ಹನೀಫ್ ಮದನಿ ಅಂಬಾಗಿಲು, ಉಮರ್ ಮದನಿ ಕಾಮಿಲ್, ಇಸ್ಮಾಯಿಲ್ ಸಖಾಫಿ ಆತ್ರಾಡಿ, ನೌಫಲ್ ಮದನಿ ಕುಂಜಾಲು, ಅಬ್ದುರ್ರಶೀದ್ ಸಖಾಫಿ ಮಜೂರು, ಶರೀಫ್ ಮುಸ್ಲಿಯಾರ್ ಮಟಪಾಡಿ, ಹಾಜಿ ಅಬೂಬಕ್ಕರ್ ನೇಜಾರು, ಕೆ.ಪಿ.ಇಬ್ರಾಹಿಂ ಮಟಪಾಡಿ, ಇಕ್ಬಾಲ್ ಕುಂಜಾಲು ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಜಿ.ಎ.ರೆಹಮಾನ್, ಗೌರವಾಧ್ಯಕ್ಷ ಇಸ್ಮಾಯಿಲ್ ಸಾಹೇಬ್, ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್ ಮೊಹಮ್ಮದ್, ಗೋಳಿಕಟ್ಟೆ ಹಿದಾಯುತುಲ್ ಇಸ್ಲಾಂ ಮದರಸ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಲಿ, ಅಲ್ಫಲಾಹ್ ಯಂಗ್ಮೆನ್ಸ್ ಅಧ್ಯಕ್ಷ ಮೊಹಮ್ಮದ್ ಸಿರಾಜ್ ಉಪಸ್ಥಿತರಿದ್ದರು.
ಸುನ್ನೀ ಕೋ ಆರ್ಡಿನೇಷನ್ ಜಿಲ್ಲಾಧ್ಯಕ್ಷ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನೀಫ್ ಗೋಳಿಕಟ್ಟೆ ಸ್ವಾಗತಿಸಿದರು.
ಬಳಿಕ ಸಾರ್ವಜನಿಕ ಮಸೀದಿ ಸಂದರ್ಶನ ಕಾರ್ಯಕ್ರಮವು ಜರಗಿತು.






