ಉಡುಪಿ | ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಸಿರಾಜ್ ಮಲ್ಪೆ ನಿಧನ

ಉಡುಪಿ, ಜ.2: ಜಮಾಅತೆ ಇಸ್ಲಾಮಿ ಹಿಂದ್ ಮಲ್ಪೆ ಶಾಖೆಯ ಅಧ್ಯಕ್ಷ ಸಿರಾಜ್ ಮಲ್ಪೆ(55) ಶುಕ್ರವಾರ ಮಣಿಪಾಲದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಹೃದಯ ಸಂಬಂಧಿ ಸಮಸ್ಯೆಯಿಂದ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದ ಇವರು, ಚಿಕಿತ್ಸೆ ಮಧ್ಯೆ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಮಾಜ ಸೇವಕರು, ಉತ್ತಮ ಸಂಘಟಕರು ಆಗಿದ್ದ ಇವರು, ತನ್ನನ್ನು ಸಮುದಾಯ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಓದು, ಬರಹದ ಅಭಿರುಚಿ ಹೊಂದಿದ್ದ ಅವರು ತಮ್ಮ ಆಸಕ್ತಿ ವಿಷಯಗಳ ಕುರಿತು ಬರಹಗಳನ್ನು ಆಗಾಗ ನಿಯತಕಾಲಿಕಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿದ್ದರು. ಸಮಾಜ ಸೇವಾ ಉದ್ದೇಶದ ಅನುಗ್ರಹ ಟ್ರಸ್ಟ್ ಉಡುಪಿ ಇದರ ಸದಸ್ಯರೂ ಆಗಿದ್ದರು. ಮಲ್ಪೆಯ ಫ್ಲವರ್ಸ್ ಆಫ್ ಪ್ಯಾರಡೈಸ್ ಮತ್ತು ತೋನ್ಸೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಹಿತೈಷಿಯಾಗಿದ್ದರು.
ಇವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾಧ್ಯಕ್ಷ ಡಾ.ಅಬ್ದುಲ್ ಅಝೀಝ್ ಸಂತಾಪ ವ್ಯಕ್ತಪಡಿಸಿದ್ದಾರೆ.





