ಉಡುಪಿ | ನಮ್ಮ ನಾಡ ಒಕ್ಕೂಟ ಕುಂದಾಪುರ ಅಧ್ಯಕ್ಷರಾಗಿ ಜಮಾಲ್ ಗುಲ್ವಾಡಿ ಆಯ್ಕೆ

ಉಡುಪಿ, ನ.25 : ನಮ್ಮ ನಾಡ ಒಕ್ಕೂಟ ಕುಂದಾಪುರ ತಾಲೂಕು ಸಮಿತಿ ಸಭೆ ಅಧ್ಯಕ್ಷರಾದ ದಸ್ತಗೀರ್ ಸಾಹೇಬ್ ಅಧ್ಯಕ್ಷತೆಯಲ್ಲಿ ಕಮ್ಯೂನಿಟಿ ಸೆಂಟರ್ ಸಭಾಭವನದಲ್ಲಿ ನಡೆಯಿತು.
2026-27ನೇ ಸಾಲಿನ ಕುಂದಾಪುರ ತಾಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ಜಮಾಲ್ ಗುಲ್ವಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಲಫಾಜ್ ಕುಂದಾಪುರ, ಉಪಾಧ್ಯಕ್ಷರಾಗಿ ಶಾಬನ್ ಹಂಗಳೂರ್, ಖಜಾಂಚಿಯಾಗಿ ಎಸ್.ಅನ್ವರ್ ಕಂಡ್ಲೂರ್, ಸಂಘಟನ ಕಾರ್ಯದರ್ಶಿ ಯಾಗಿ ಹ್ಯಾರಿಸ್ ಹೆಮ್ಮಾಡಿ, ಜೊತೆ ಕಾರ್ಯದರ್ಶಿಯಾಗಿ ಪಳ್ಳಿ ಉಸ್ಮಾನ್ ಗುಲ್ವಾಡಿ ಅವಿರೋಧವಾಗಿ ಆಯ್ಕೆಗೊಂಡರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಬಿಎಸ್ಎಫ್, ಚುನಾವಣೆ ಅಧಿಕಾರಿಯಾಗಿ ಪೀರು ಸಾಹೇಬ್, ಸೈಯದ್ ಅಜ್ಮಿಲ್ ಶಿರ್ರೂ, ಸೆಂಟ್ರಲ್ ಕಮಿಟಿಯ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಫಾಝಿಲ್ ಆದಿ ಉಡುಪಿ, ಖಜಾಂಚಿ ಝಹಿರ್ ಅಹ್ಮದ್ ಗಂಗೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.
Next Story





