ಉಡುಪಿ | ಕರಂಬಳ್ಳಿ ಬ್ರಾಹ್ಮಣ ಸಮಿತಿ ವಾರ್ಷಿಕೋತ್ಸವ : ಸಾಧಕರಿಗೆ ಸನ್ಮಾನ

ಉಡುಪಿ, ಡಿ.9: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ 19ನೇ ವಾರ್ಷಿಕೋತ್ಸವ ಕರಂಬಳ್ಳಿ ಶ್ರೀವೆಂಕಟರಮಣ ದೇವಸ್ಥಾನದ ಶ್ರೀನಿವಾಸ ಸಭಾಭವನದಲ್ಲಿ ನಡೆಯಿತು.
ದೇವಸ್ಥಾನದಲ್ಲಿ ದೇವರಿಗೆ ವಿಷ್ಣು ಸಹಸ್ರ ನಾಮಾವಳಿ ಸಹಿತ ತುಳಸಿ ಅರ್ಚನೆ, ವಿವಿಧ ಆರಾಧನೆ, ಮಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆ, ರಂಗೋಲಿ ಸ್ಪರ್ಧೆ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಸಮಿತಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಕೀಳಂಜೆ ಕೃಷ್ಣರಾಜ ಭಟ್ ಅವರನ್ನು 5ನೇ ಅವಧಿಗೆ ಸಮಿತಿಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮಾಜಿ ಶಾಸಕ ರಘುಪತಿ ಭಟ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಡಾ.ಮಾಲತಿ ಕೃಷ್ಣಮೂರ್ತಿ(ಸಂಶೋಧಕಿ), ಮದ್ವೇಶ ಭಟ್(ಸಂಗೀತ ಕ್ಷೇತ್ರ) ಬಿ.ಸುಬ್ರಹ್ಮಣ್ಯ ಆಚಾರ್ಯ(ಪಾಕ ತಜ್ಞ), ಕಲ್ಮಂಜೆ ವಾಮನ ಭಟ್ (ಧಾರ್ಮಿಕ ಕ್ಷೇತ್ರ) ಅವರನ್ನು ಸನ್ಮಾನಿಸಿದರು.
ವಿದ್ಯಾನಿಧಿ ಅರ್ಪಣೆ, ವಿವಾಹದ ಸುವರ್ಣ ಮಹೋತ್ಸವ ಆಚರಿಸಿಕೊಂಡ ದಂಪತಿಗಳಿಗೆ ಗೌರವಾರ್ಪಣೆ, ಸಮಿತಿಯ ಹೊಸ ಸದಸ್ಯರು ಹಾಗೂ ಗೋಪಾಲಕರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಎಸ್.ಭಟ್ ಮುಗ್ಗೇರಿ ಅವರನ್ನು ಅಭಿನಂದಿಸಲಾಯಿತು.
ತುಳು ಶಿವಳ್ಳಿ ಮಧ್ವ ಮಹಾಮಂಡಲದ ಅಧ್ಯಕ್ಷ ಜಯರಾಮ್ ಆಚಾರ್ಯ ಬೈಲೂರು ಶುಭಶಂಸನೆಗೈದರು. ಉಡುಪಿ ತಾಲೂಕು ಮಹಾ ಸಭಾದ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾಯ, ಹಿರಿಯ ಸದಸ್ಯ ಕೆ.ಎಂ.ಉಡುಪ, ಅರ್ಚಕ ದಿವಾರ್ಕ ಐತಾಳ್, ಸಮಿತಿಯ ಉಪಾಧ್ಯಕ್ಷ ರಂಗನಾಥ ಸಾಮಗ, ಮಾಜಿ ಅಧ್ಯಕ್ಷ ಶ್ರೀನಿವಾಸ ಬಲ್ಲಾಳ, ಕೋಶಾಧಿಕಾರಿ ಅಜಿತ್ ಬಿಜಾಪುರ ಉಪಸ್ಥಿತರಿದ್ದರು.
ಕ್ರೀಡಾ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಆಚಾರ್ಯ ಗುಂಡಿಬೈಲು, ಶ್ರೀಪತಿ ಭಟ್, ರಂಗನಾಥ ಸರಳಾಯ, ಚಂದ್ರಕಾಂತ ಕೆ.ಎನ್., ಪ್ರಕಾಶ ಆಚಾರ್ಯ, ರಾಜಶೇಖರ್ ಭಟ್, ವೇದವ್ಯಾಸ ಆಚಾರ್ಯ, ವಸುಧಾ ಭಟ್, ಸುಧಾ ಹರಿದಾಸ್, ಜಯಶ್ರೀ ಬಾರಿತ್ತಾಯ, ರಾಧಿಕಾ ಭಟ್, ಶ್ಯಾಮಲಾ ರಾವ್ ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಕವಿತಾ ಆಚಾರ್ಯ ಮತ್ತು ರೂಪಾ ಲಕ್ಷ್ಮೀಶ ನಿರ್ವಹಿಸಿದರು. ಸಮಿತಿಯ ಅಧ್ಯಕ್ಷ ಕೀಳಂಜೆ ಕೃಷ್ಣರಾಜ್ ಭಟ್ ಸ್ವಾಗತಿಸಿದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಾಗರಾಜ ಭಟ್ ವಂದಿಸಿದರು.







