ಉಡುಪಿ | ಖೇಲೋ ಇಂಡಿಯಾ ಬಾಲಕಿಯರ ಅತ್ಲೆಟಿಕ್ ಕೂಟ ಉದ್ಘಾಟನೆ

ಉಡುಪಿ, ನ.23: ಉಡುಪಿ ಜಿಲ್ಲಾ ಅಮೆಚೂರು ಅತ್ಲೆಟಿಕ್ ಸಂಸ್ಥೆಯ ವತಿಯಿಂದ ಖೇಲೋ ಇಂಡಿಯಾ ಬಾಲಕಿಯರ ಅತ್ಲೆಟಿಕ್ ಕೂಟ ‘ಅಸ್ಮಿತ ಅತ್ಲೆಟಿಕ್ಸ್ ಲೀಗ್’ ರವಿವಾರ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿತು.
ಕ್ರೀಡಾಕೂಟವನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಿ, ಶುಭಹಾರೈಸಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಅಮೆಚೂರು ಅತ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ರಾಷ್ಟ್ರೀಯ ಅಥ್ಲೆಟ್ ಡಾ.ಸ್ಯಾಂಡ್ರಾ ಅನ್ಸಿಲಾ ಡಿಸೋಜ, ಉಡುಪಿ ಜಿಲ್ಲಾ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ತರಬೇತುದಾರ ಶಿವಕುಮಾರ್ ಉಪಸ್ಥಿತರಿದ್ದರು.
ಜಿಲ್ಲಾ ಅಮೆಚೂರು ಅತ್ಲೆಟಿಕ್ ಸಂಸ್ಥೆಯ ದಿನೇಶ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವರದರಾಜ್ ಕಾರ್ಯಕ್ರಮ ನಿರೂಪಿಸಿದರು. ಈ ಕ್ರೀಡಾಕೂಟದಲ್ಲಿ 14ವರ್ಷದೊಳಗಿನ ಮತ್ತು 16ವರ್ಷದೊಳಗಿನ 150 ಬಾಲಕಿಯರು ಪಾಲ್ಗೊಂಡಿದ್ದರು.
Next Story





