ಉಡುಪಿ | ಪೆರಂಪಳ್ಳಿ ಶೀಂಬ್ರ ನದಿಗೆ ಸಂರಕ್ಷಣಾ ಕಾಮಗಾರಿಗೆ ಚಾಲನೆ

ಉಡುಪಿ, ಡಿ.9: ಮೂಡು ಪೆರಂಪಳ್ಳಿ ವಾರ್ಡಿನ ಶೀಂಬ್ರ ಮಹಾಗಣಪತಿ ದೇವಸ್ಥಾನದ ಹತ್ತಿರ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ 2.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪ್ರತಿವರ್ಷ ಕೃಷ್ಣಂಗಾರಕ ಚತುರ್ದಶಿಯಂದು ಸಾವಿರಾರು ಭಕ್ತರು ತೀರ್ಥಸ್ನಾನಕ್ಕೆ ಆಗಮಿಸುವ ಶೀಂಬ್ರ ಮಹಾಗಣಪತಿ ದೇವಸ್ಥಾನದ ಸ್ನಾನಘಟ್ಟ ಕಳೆದ ಎರಡು ವರ್ಷದ ಹಿಂದೆ ತೀವ್ರ ನದಿ ಕೊರೆತದಿಂದ ಕೊಚ್ಚಿ ಹೋಗಿ ಭಕ್ತಾದಿಗಳಿಗೆ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ತಕ್ಷಣ ಕಾಮಗಾರಿ ನಡೆಸಿ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಸಂರಕ್ಷಣಾ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಪ್ರಸ್ತಾವನೆ ಸಲ್ಲಿಸಿ ಇದೀಗ ಮಂಜೂರಾದ 2.25 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ನಡೆಸಲಾಗುತ್ತಿದೆ ಎಂದರು.
ಶೀಂಬ್ರ ಮಹಾಗಣಪತಿ ದೇವಸ್ಥಾನದ ಪ್ರಮುಖರಾದ ಕೆ.ರಮೇಶ್ ರಾವ್, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಮಾತನಾಡಿದರು. ಈ ಸಂದರ್ಭಲ್ಲಿ ದೇವಳದ ಅರ್ಚಕ ನವೀನ್ ಶಿವತ್ತ, ಸ್ಥಳೀಯ ನಗರಸಭಾ ಸದಸ್ಯೆ ಅನಿಟ ಡಿಸೋಜ, ಆರ್ಕಿಟೆಕ್ಟ್ ರಾಜೇಂದ್ರ ಮಯ್ಯ, ಮಾಜಿ ನಗರಸಭಾ ಸದಸ್ಯ ಪ್ರಶಾಂತ್ ಭಟ್, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ಡೆನಿಸ್ ಮಸ್ಕರೇನಸ್, ಶಶಾಂಕ್ ಶಿವತ್ತಾಯ, ವಿಜಯ ಪೂಜಾರಿ, ಸಂತೋಷ್ ಅಮೀನ್, ಸುಮ, ಯಶೋಧರ ಅಮೀನ್, ಲೀನಾ, ರಂಜಿತ್, ಸತೀಶ್, ಶೆರ್ಲಿನ್ ಮೊದಲಾದವರು ಉಪಸ್ಥಿತರಿದ್ದರು.







