ಉಡುಪಿ | ಲಾರಿ- ಕಾರು ಢಿಕ್ಕಿ: ನಾಲ್ವರಿಗೆ ಗಾಯ

ಸಾಂದರ್ಭಿಕ ಚಿತ್ರ
ಉಡುಪಿ, ಡಿ.5: ಲಾರಿಯೊಂದು ಕಾರಿ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸಹಿತ ನಾಲ್ವರು ಗಾಯಗೊಂಡ ಘಟನೆ ಡಿ.4ರಂದು ಸಂಜೆ ವೇಳೆ ಸಂತೆಕಟ್ಟೆ ಅಂಡರ್ ಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಗಾಯಗೊಂಡವರನ್ನು ಕಲ್ಯಾಣಪುರದ ಬಡಗುನಯಂಪಳ್ಳಿ ನಿವಾಸಿ ವರುಣ್ ಕುಮಾರ್ ಎಸ್.ಜಿ.(40), ಅವರ ಅತ್ತೆ ಜಯಂತಿ ಬಲ್ಲಾಳ್ (72), ಮಕ್ಕಳಾದ ತೇಜಸ್(12) ದೀಕ್ಷಾ(7) ಎಂದು ಗುರುತಿಸಲಾಗಿದೆ. ಇದರಲ್ಲಿ ತೀವ್ರವಾಗಿ ಗಾಯಗೊಂಡ ಜಯಂತಿ ಬಲ್ಲಾಳ್ ಹಾಗೂ ವರುಣ್ ಕುಮಾರ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂತೆಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ಲಾರಿಯು ರಸ್ತೆಯ ಬಲಬದಿಗೆ ಬಂದು ಅದೇ ರಸ್ತೆಯ ಮಧ್ಯೆ ಡೈವರ್ಶನ್ ಬಳಿ ಕುಂದಾಪುರ- ಉಡುಪಿ ರಸ್ತೆಗೆ ತಿರುಗಿಸಲು ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಕಾರಿನಲ್ಲಿ ನಾಲ್ವರು ಗಾಯಗೊಂಡರೆಂದು ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





