ಉಡುಪಿ | ವಾಟ್ಸಾಪ್ ಗೆ ಬಂದ APK ಫೈಲ್ ಡೌನ್ಲೋಡ್ ಮಾಡಿ 10.70ಲಕ್ಷ ರೂ. ಕಳೆದುಕೊಂಡ ವ್ಯಕ್ತಿ !

ಉಡುಪಿ, ಡಿ.6: ಅಪರಿಚಿತ ನಂಬರಿನಿಂದ ವಾಟ್ಸಾಪ್ ಗೆ ಬಂದ ಫೈಲ್ನ್ ಅನ್ನು ಡೌನ್ಲೋಡ್ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ತಮ್ಮ ಖಾತೆಯಿಂದ ಲಕ್ಷಾಂತರ ರೂ. ಹಣ ಕಳೆದುಕೊಂಡು ವಂಚನೆ ಒಳಗಾಗಿರುವ ಬಗ್ಗೆ ವರದಿಯಾಗಿದೆ.
ಉಡುಪಿ ಕರಂಬಳ್ಳಿಯ ಕಮಲನಾಭ ಬಾಯರಿ ಎಸ್.(57) ಎಂಬವರ ವಾಟ್ಸಾಪ್ ನಂಬರ್ ಗೆ ಡಿ.4 ಹಾಗೂ 5ರಂದು ಅಪರಿಚಿತ ನಂಬರಿನಿಂದ ಎ.ಪಿ.ಕೆ ಫೈಲ್ ಬಂದಿದ್ದು, ಅದನ್ನು ಕಮಲನಾಭ ಡೌನ್ಲೋಡ್ ಮಾಡಿದರು. ಆಗ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 10,70,000ರೂ. ಹಣ ಕಡಿತವಾಗಿರುವುದು ಕಂಡುಬಂದಿದೆ. ಸೈಬರ್ ವಂಚಕರು ಮೋಸ ಮಾಡಿ ಇವರಿಗೆ ವಂಚನೆ ಮಾಡಿದ್ದಾರೆಂದು ದೂರಲಾಗಿದೆ.
ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





