ಉಡುಪಿ | ಹಿರಿಯ ನಾಗರಿಕರಿಗಾಗಿ ವೈದ್ಯಕೀಯ ಶಿಬಿರ

ಉಡುಪಿ, ನ.16: ಬ್ರಹ್ಮಗಿರಿ ಶ್ರೀಸತ್ಯಸಾಯಿ ಸೇವಾ ಸಮಿತಿ, ಉಡುಪಿ ಗಾಂಧಿ ಆಸ್ಪತ್ರೆ, ಮಣಿಪಾಲದ ಕೆಎಂಸಿ ಆಸ್ಪತ್ರೆ, ಭಾರತೀಯ ವೈದ್ಯರ ಸಂಘ ಉಡುಪಿ, ಮಣಿಪಾಲ ವಿಭಾಗ, ಶ್ರೀಕೃಷ್ಣ ಯೋಗ ಕೇಂದ್ರ ಉಡುಪಿ ಹಿರಿಯ ನಾಗರಿಕರ ವೇದಿಕೆ ಉಡುಪಿ ಸಹಕಾರದೊಂದಿಗೆ ಭಗವಾನ್ ಶ್ರೀಸತ್ಯ ಸಾಯಿಬಾಬಾರವರ 100ನೇ ಜನ್ಮದಿನಾಚರಣೆಯ ಅಂಗವಾಗಿ ಹಿರಿಯ ನಾಗರಿಕರಿಗಾಗಿ ವಿಶೇಷ ವೈದ್ಯಕೀಯ ಶಿಬಿರವನ್ನು ಇತ್ತೀಚಿಗೆ ಬ್ರಹ್ಮಗಿರಿಯ ಸಾಯಿ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಸತ್ಯಸಾಯಿ ಸೇವಾ ಸಂಸ್ಥೆಗಳ ಉಡುಪಿ ಜಿಲ್ಲಾಧ್ಯಕ್ಷ ಆನಂದ ಕುಂದಾಪುರ ಚಾಲನೆ ನೀಡಿದರು. ವೈದ್ಯ ಡಾ.ಅನಂತ ಶೆಣೈ ಮಾತನಾಡಿ, ಹಿರಿಯ ನಾಗರಿಕರು ಆಗ್ಗಾಗೆ ವೈದ್ಯರ ಭೇಟಿ ಮಾಡಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಹೃದಯ ಪರೀಕ್ಷೆ, ಮಧುಮೇಹ ತಪಾಸಣೆ, ಬಿಪಿ ಪರೀಕ್ಷೆ ಜೊತೆಗೆ ನಿತ್ಯ ವ್ಯಾಯಾಮ, ವಾಕಿಂಗ್, ಮಿತ ಆಹಾರ ಸೇವನೆ, ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಸುರೇಶ್ ಹೆಗ್ಡೆ, ಡಾ.ಅನಂತ ಶೆಣೈ, ಡಾ.ಶಿವಶಂಕರ್, ಡಾ.ಕಸ್ತೂರಿ ನಾಯಕ್ ಹಾಗೂ ಇತರ ವೈದ್ಯರು ಮತ್ತು 20 ಮಂದಿ ಅರೆ ವೈದ್ಯಕೀಯ ಸಿಬ್ಬಂದಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶ್ರೀಕೃಷ್ಣ ಯೋಗ ಕೇಂದ್ರದ ಅಮಿತ್ ಶೆಟ್ಟಿ ಹಾಗೂ ಹಿರಿಯ ನಾಗರಿಕರ ವೇದಿಕೆಯ ಮುರಳಿಧರ್ ಉಪಸ್ಥಿತರಿದ್ದರು.
ವೈದ್ಯಕೀಯ ತಪಾಸಣಾ ಶಿಬಿರದಲ್ಲಿ 157 ಹಿರಿಯ ನಾಗರಿಕರು ಭಾಗವಹಿಸಿದ್ದರು. ಹಲವು ಬಗೆಯ ತಪಾಸಣೆ ನೆಡೆಸಿ ಸಲಹೆ ಸೂಚನೆ ನೀಡಲಾಯಿತು.





