ಉಡುಪಿ | ಡಿ.15ರಿಂದ ಅಣಬೆ, ಜೇನು ಕೃಷಿ ತರಬೇತಿ

ಸಾಂದರ್ಭಿಕ ಚಿತ್ರ PC | GROK
ಉಡುಪಿ, ಡಿ.6: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಆತ್ಮ ಯೋಜನೆಯಡಿ ಯುವ ರೈತ ಮತ್ತು ಯುವ ರೈತ ಮಹಿಳೆಯರಿಗೆ ಡಿ.15ರಿಂದ 19ರವರೆಗೆ ಐದು ದಿನಗಳ ಕಾಲ ಅಣಬೆ ಹಾಗೂ ಜೇನು ಕೃಷಿ ಕುರಿತು ತರಬೇತಿ ಕಾರ್ಯಕ್ರಮವನ್ನು ಕುಂದಾಪುರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಡಿ.12ರ ಒಳಗೆ ಮೇಲಿನ ಕಚೇರಿಗೆ ಆಧಾರ್, ಪಹಣೀ ಪತ್ರ, ಬ್ಯಾಂಕ್ ಖಾತೆ ಪ್ರತಿ ಮತ್ತು ಭಾವಚಿತ್ರ ನೀಡಿ ಹೆಸರು ನೋಂದಾಯಿಸಿ ಕೊಳ್ಳಬಹುದು ಎಂದು ಕುಂದಾಪುರ ಸಹಾಯಕ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
Next Story





