ಉಡುಪಿ: ಆ.7ರಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆ; 25 ಮಂದಿ ನೇಕಾರರಿಗೆ ಧನಸಹಾಯ ವಿತರಣೆ

ಉಡುಪಿ, ಆ.6: ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ, ಉಡುಪಿ ಜಿಲ್ಲಾ ಬಿಜೆಪಿ ನೇಕಾರ ಪ್ರಕೋಷ್ಠ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇವರ ಸಹಭಾಗಿತ್ವದಲ್ಲಿ ಅಪೂರ್ವ ಕಲಾಕೌಶಲ್ಯ ಕೈಮಗ್ಗದ ನೇಕಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ವೃತ್ತಿನಿರತ 25 ಕೈಮಗ್ಗದ ನೇಕಾರರಿಗೆ ತಲಾ ರೂ. 5000 ಧನ ಸಹಾಯ ವಿತರಣೆ, 5 ನೇಕಾರರಿಗೆ ಅಭಿನಂದನಾ ಸಮಾರಂಭ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಕೈಮಗ್ಗದ ಸೀರೆಗಳನ್ನು ಉಟ್ಟು ಜರುಗಲಿರುವ ಸೌಂದರ್ಯ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಆ.7ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರುಗಲಿದೆ.
ಕಾರ್ಯಕ್ರಮವನ್ನು ಬೆಳಗ್ಗೆ 10:30ಕ್ಕೆ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭ ಹಾಗೂ ಸಹಾಯಧನ ವಿತರಣೆ ಅಪರಾಹ್ನ 3:00ಗಂಟೆಗೆ ನಡೆಯಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
Next Story





