ಉಡುಪಿ| ಪೊಲೀಸರ ಹೆಸರಿನಲ್ಲಿ 11 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಶಿರ್ವ, ಜು.31: ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಲ್ಲಿಯಮ್ ಪಾವ್ಲ್ ಕೊರೆಯ ಎಂಬವರಿಗೆ ಜು.28ರಂದು ಅಪರಿಚಿತ ವ್ಯಕ್ತಿಯು ಕರೆ ಮಾಡಿ, ನಿಮ್ಮ ಸಿಮ್ ಇಶ್ಯೂ ಆಗಿದ್ದು, ಈ ನಂಬರಿನಲ್ಲಿ 20 ಕೇಸ್ ದಾಖಲಾಗಿದೆ. ಮನಿ ಲಾಂಡ್ರಿಂಗ್ ಕೇಸ್‌ನಲ್ಲಿ ನಿಮ್ಮ ಹೆಸರಿದೆ ಎಂದು ಹೇಳಿ 6 ಜನರ ಫೋಟೋ ಕಳಿಸಿ ಇವರ ಪರಿಚಯ ಇದೆಯೇ ಎಂದು ಹೆದರಿಸಿದರು.
ಅಲ್ಲದೇ ಸಬ್ ಇನ್‌ಸ್ಪೆಕ್ಟರ್ ಮ್ಯಾಥ್ಯೂ ಕೊಲಬಾ ಪೊಲೀಸ್ ಸ್ಟೇಷನ್ ಎಂದು ಮಾತಾನಾಡಿ ಕೂಡಲೇ ಹಣ ಹಾಕು ವಂತೆ ತಿಳಿಸಿದ್ದು, ಇದರಿಂದ ಭಯಭೀತರಾದ ವಿಲ್ಲಿಯಮ್ ಪಾವ್ಲ್ ಜು.29ರಂದು 6 ಲಕ್ಷ ರೂ. ಹಣವನ್ನು ಹಾಗೂ ಜು.30ರಂದು 5 ಲಕ್ಷ ರೂ. ಹಣವನ್ನು ವರ್ಗಾಯಿಸಿ ವಂಚನೆಗೆ ಒಳಗಾಗಿದ್ದಾರೆ ಎಂದು ದೂರಲಾಗಿದೆ.
Next Story




