ಉಡುಪಿ, ಡಿ.9: ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಡಿಸೆಂಬರ್ 12ರಂದು ಅಪರಾಹ್ನ 3:00 ಗಂಟೆಗೆ ಅಂಚೆ ಪಿಂಚಣಿ ಅದಾಲತ್ ನಡೆಯಲಿದೆ.
ಅಂಚೆ ಇಲಾಖೆಯ ಪಿಂಚಣಿದಾರರು ತಮ್ಮ ಅಹವಾಲು ಗಳಿದ್ದಲ್ಲಿ ಡಿ.11ರ ಒಳಗೆ ಮೇಲಿನ ಕಚೇರಿಗೆ ತಲುಪಿಸಬಹುದು ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.