Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿ | ದೇಶಕ್ಕಾಗಿ ‘ನವ ಸಂಕಲ್ಪ’ಕ್ಕೆ...

ಉಡುಪಿ | ದೇಶಕ್ಕಾಗಿ ‘ನವ ಸಂಕಲ್ಪ’ಕ್ಕೆ ಪ್ರತಿ ಭಾರತೀಯನಿಗೂ ಪ್ರಧಾನಿ ಕರೆ

ವಾರ್ತಾಭಾರತಿವಾರ್ತಾಭಾರತಿ28 Nov 2025 7:58 PM IST
share
ಉಡುಪಿ | ದೇಶಕ್ಕಾಗಿ ‘ನವ ಸಂಕಲ್ಪ’ಕ್ಕೆ ಪ್ರತಿ ಭಾರತೀಯನಿಗೂ ಪ್ರಧಾನಿ ಕರೆ
► ಭಗವದ್ಗೀತೆಯ 15ನೇ ಅಧ್ಯಾಯವನ್ನು ಪಠಿಸಿದ ನರೇಂದ್ರ ಮೋದಿ ► ಪುತ್ತಿಗೆ ಮಠದಿಂದ ‘ಭಾರತ ಭಾಗ್ಯ ವಿಧಾತ’ ಬಿರುದು, ಸನ್ಮಾನ

ಉಡುಪಿ, ನ.28 : ಸಮುದಾಯದ ಜವಾಬ್ದಾರಿ, ಸಾಂಸ್ಕೃತಿಕ ಸಂರಕ್ಷಣೆ ಹಾಗೂ ಸುಸ್ಥಿರ ಅಭ್ಯಾಸಗಳ ಮೂಲಕ ದೇಶವನ್ನು ಬಲಪಡಿಸಲು ಪ್ರತಿಯೊಬ್ಬ ಭಾರತೀಯನೂ ‘ನವ ಸಂಕಲ್ಪ’ವನ್ನು ಸ್ವೀಕರಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆಯುತ್ತಿರುವ ಬೃಹತ್ ಗೀತೋತ್ಸವದಲ್ಲಿ ಶುಕ್ರವಾರ ಹಮ್ಮಿಕೊಂಡ ಲಕ್ಷ ಕಂಠ ಗೀತ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವದ್ಗೀತೆಯ 15ನೇ ಅಧ್ಯಾಯವನ್ನು ಸಾವಿರಾರು ಮಹಿಳೆಯರು, ವೇದಪಾಠಶಾಲಾ ವಿದ್ಯಾರ್ಥಿಗಳು, ಧಾರ್ಮಿಕ ವ್ಯಕ್ತಿಗಳು ಹಾಗೂ ಸಭಿಕರೊಂದಿಗೆ ಪಠಿಸಿದ ಬಳಿಕ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ದೇಶದ ಪ್ರತಿಯೊಬ್ಬ ಪ್ರಜೆಯೂ ವೈಯಕ್ತಿಕ ಗುರಿಯನ್ನು ಹೊಂದಿರಬೇಕು. ದೇಶದ ವರ್ತಮಾನ ಹಾಗೂ ಭವಿಷ್ಯಕ್ಕೆ ಇವು ಅತಿಮುಖ್ಯ. ಇದಕ್ಕಾಗಿ ಪ್ರತಿಯೊಬ್ಬರು ನವ ಸಂಕಲ್ಪಗಳನ್ನು ಮಾಡಬೇಕು ಎಂದು ಅವುಗಳನ್ನು ಒಂದೊಂದಾಗಿ ಪಟ್ಟಿ ಮಾಡಿ ವಿವರಿಸಿದರು.

ಶುದ್ಧ ನೀರಿಗಾಗಿ ಜಲ ಸಂರಕ್ಷಣೆ ಹಾಗೂ ನದಿಗಳ ಉಳಿಸುವಿಕೆ, ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಕನಿಷ್ಠ ಒಂದು ಮರ ನೆಡುವ, ಪ್ರತಿಯೊಬ್ಬರೂ ಕನಿಷ್ಠ ಒಬ್ಬನಾದರೂ ಬಡವನಿಗೆ ಸಹಾಯ ಮಾಡುವಂತೆ, ಸ್ವದೇಶಿ, ಆತ್ಮನಿರ್ಭರ ಭಾರತಕ್ಕೆ ಬೆಂಬಲ, ನೈಸರ್ಗಿಕ, ಸಾವಯವ ಕೃಷಿಗೆ ಒತ್ತು, ಆರೋಗ್ಯಪೂರ್ಣ ಜೀವನ ಶೈಲಿ, ಸಿರಿಧಾನ್ಯಗಳ ಬಳಕೆ ಹಾಗೂ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವುದು, ಜೀವನದಲ್ಲಿ ಯೋಗಾಭ್ಯಾಸ, ಹಸ್ತಪ್ರತಿಗಳ ಸಂರಕ್ಷಣೆಯ ದೀಕ್ಷೆ, ಪ್ರತಿಯೊಬ್ಬರು ಕನಿಷ್ಠ ದೇಶದ 25 ಪಾರಂಪರಿಕ ಕ್ಷೇತ್ರಗಳ ದರ್ಶನ ಸಂಕಲ್ಪ ತೊಡುವಂತೆ ಅವರು ಮನವಿ ಮಾಡಿದರು.

ದೇಶದಲ್ಲಿ ಲಭ್ಯವಿರುವ ವಿಪುಲ, ಅತ್ಯಮೂಲ್ಯ ಹಸ್ತಪ್ರತಿಗಳನ್ನು ಸಂರಕ್ಷಿಸುವ ಮೂಲಕ ನಮ್ಮ ಸಾಂಪ್ರದಾಯಿಕ, ಪುರಾತನ ಜ್ಞಾನಭಂಡಾರವನ್ನು ಸಂರಕ್ಷಿಸಬೇಕಾಗಿದೆ. ಇದಕ್ಕಾಗಿ ಕೇಂದ್ರ ಸರಕಾರ ಈಗಾಗಲೇ ‘ಗ್ಯಾನ್ ಭಾರತ್ ಮಿಷನ್’ ಪ್ರಾರಂಭಿಸಿದೆ. ಇದರೊಂದಿಗೆ ದೇಶದ ಪರಂಪರಾ ಹಾಗೂ ವಿರಾಸತ್ ಗಳನ್ನು ಜೋಡಿಸುವ 25 ಸ್ಥಳಗಳಿಗೆ ಭೇಟಿ ನೀಡಿ ಎಂದು ಸಲಹೆ ನೀಡಿದ ಪ್ರಧಾನಮಂತ್ರಿಗಳು ಎರಡು ದಿನಗಳ ಹಿಂದೆ ತಾನು ಲೋಕಾರ್ಪಣೆ ಮಾಡಿದ ಕುರುಕ್ಷೇತ್ರ ಮಹಾಭಾರತ ಅನುಭವ ಕೇಂದ್ರ ಹಾಗೂ ಗುಜರಾತ್ನ ಮಾಧವಪುರದ ಕೃಷ್ಣ-ರುಕ್ಮಿಣಿ ಮೇಳವನ್ನು ಉದಾಹರಣೆಯಾಗಿ ನೀಡಿದರು.

ಸರಕಾರಿ ಕಾರ್ಯಕ್ರಮಗಳಿಗೆ ಗೀತೆ ಸ್ಪೂರ್ತಿ :

ಶ್ರೀಕೃಷ್ಣನ ಸಂದೇಶಗಳಿರುವ ಭಗವದ್ಗೀತೆಯೇ ಸರಕಾರದ ಬಹಳಷ್ಟು ಪ್ರಮುಖ ಕಾರ್ಯಕ್ರಮಗಳಿಗೆ ಸ್ಪೂರ್ತಿಯಾಗಿದೆ ಎಂದು ಹೇಳಿದ ಮೋದಿ, ಇವುಗಳಲ್ಲಿ ಆಯುಷ್ಮಾನ್ ಭಾರತ, ಪಿಎಂ ಆವಾಸ್ ಯೋಜನಾ, ಅಂ.ರಾ.ಸೋಲಾರ್ ಒಡಂಬಡಿಕೆಗಳು ಸೇರಿವೆ ಎಂದರು.

ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಐತಿಹಾಸಿಕ ಕಾನೂನಿನ ಕುರಿತು ವಿವರಿಸಿದ ಪ್ರಧಾನಮಂತ್ರಿಗಳು, ಇದು ದೇಶದ ಜನತೆಯ ಏಳಿಗೆ ಹಾಗೂ ದೇಶದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟು ಜಾರಿಗೊಳಿಸಿದ ಯೋಜನೆಗಳಾಗಿವೆ. ದೇಶವನ್ನು ಪ್ರಗತಿಪಥದತ್ತ ಒಯ್ಯಲು ನಾವು ನಡೆಸುವ ಪ್ರಯತ್ನಗಳಾಗಿವೆ ಎಂದರು.

ನಮ್ಮ ಸರಕಾರದ 2027ರ ಅಮೃತಕಾಲದ ಗುರಿಯನ್ನು ಸಾಕಾರಗೊಳಿಸಲು ವಿಕಸಿತ ಭಾರತದ ಕನಸನ್ನು ನನಸಾಗಿಸಲು ಪ್ರತಿಯೊಬ್ಬ ಭಾರತೀಯನೂ ತನ್ನ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. ಇದರಲ್ಲಿ ಕರ್ನಾಟಕದ ಪಾಲು ಹೆಚ್ಚಿನದಾಗಿದೆ. ವಿಕಸಿತ ಕರ್ನಾಟಕ- ವಿಕಸಿತ ಭಾರತದ ಕನಸನ್ನು ನಾವೆಲ್ಲರೂ ಸೇರಿ ಸಾಕಾರಗೊಳಿಸೋಣ ಎಂದು 28 ನಿಮಿಷಗಳ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿ.ವೈ ರಾಘವೇಂದ್ರ, ರಾಜ್ಯಸಭಾ ಸಂಸದ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಶಾಸಕರಾದ ವಿ.ಸುನಿಲ್ ಕುಮಾರ್, ಯಶ್ಪಾಲ್ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ.ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ ಶೆಟ್ಟಿ, ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ ಹಾಗೂ ಇತರರು ಉಪಸ್ಥಿತರಿದ್ದರು.

ಡಾ.ಡಿ.ವೀರೇಂದ್ರ ಹೆಗ್ಗಡೆ ಅತಿಥಿಗಳನ್ನು ಸ್ವಾಗತಿಸಿದರು. ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಪ್ರಾಸ್ತಾವಿಕ ಮಾತುಗಳೊಂದಿಗೆ ಆಶೀವಚನ ನೀಡಿದರು. ಡಾ.ಗೋಪಾಲಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು.

ಭಾರತ ಭಾಗ್ಯ ವಿಧಾತ ಬಿರುದು, ಸನ್ಮಾನ :

ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಭಗವದ್ಗೀತೆಯ 18 ಅಧ್ಯಾಯಗಳಲ್ಲಿ 15ನೇಯದಾದ ‘ಪುರುಷೋತ್ತಮ ಯೋಗ’ವನ್ನು ಸಭಿಕರೊಂದಿಗೆ ಸೇರಿ ಪಠನ ನಡೆಸಿದರು.

ಬಳಿಕ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ‘ಭಾರತ ಭಾಗ್ಯ ವಿಧಾತ’ ಬಿರುದಿನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶಿಷ್ಟವಾದ ಪೇಟ, ಬೆಳ್ಳಿಯ ಕಡಗೋಲು, ಕೃಷ್ಣ ವಿಗ್ರಹ, ಬೆಳ್ಳಿಯ ಸ್ಮರಣಿಕೆ, ಸನ್ಮಾನಪತ್ರದೊಂದಿಗೆ ಸನ್ಮಾನಿಸಿದರು.

ಸಮಾರಂಭದ ವೈಶಿಷ್ಟಗಳು... :

► ಎಲ್ಲರಿಗೂ ನಮಸ್ಕಾರಗಳು... ಎಂಬ ಕನ್ನಡದ ನುಡಿಯೊಂದಿಗೆ 28 ನಿಮಿಷಗಳ ಭಾಷಣ ಪ್ರಾರಂಭಿಸಿದ ಮೋದಿ, 28 ನಿಮಿಷಗಳ ಕಾಲ ನಿರರ್ಗಳ ಹಿಂದಿಯಲ್ಲಿ ಮಾತನಾಡಿದರು.

► ಪ್ರೇಕ್ಷಕರಲ್ಲಿ ಕೆಲವು ಮಕ್ಕಳು ತಾವೇ ಬಿಡಿಸಿದ ಮೋದಿಯವರ ಭಾವಚಿತ್ರವನ್ನು ಹಿಡಿದು ನಿಂತಿರುವುದನ್ನು ಗಮನಿಸಿದ ಪ್ರಧಾನಿ, ಅವರಿಂದ ಅವುಗಳನ್ನು ಪಡೆದು ತನಗೆ ತಲುಪಿಸುವಂತೆ ಭದ್ರತಾ ಸಿಬ್ಬಂದಿಗಳಿಗೆ (ಎಸ್ಪಿಜಿ) ಸೂಚಿಸಿದರು. ಈ ಚಿತ್ರಗಳಲ್ಲಿ ತಮ್ಮ ವಿಳಾಸವಿದ್ದರೆ ಖಂಡಿತ ನನ್ನಿಂದ ಕೃತಜ್ಞತಾ ಸಂದೇಶ ಪಡೆಯುತ್ತೀರಿ ಎಂದು ಅವರಿಗೆ ಹೇಳಿ ಖುಷಿ ಪಡಿಸಿದರು.

► ತಮ್ಮ ಭಾಷಣದ ವೇಳೆ ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯರನ್ನು ಒಂದೆರಡು ಬಾರಿ ನೆನಪಿಸಿಕೊಂಡ ಮೋದಿ, ಜನಸಂಘದ ಮೂಲಕ ಬಿಜೆಪಿ ಇಲ್ಲಿ ಗಟ್ಟಿನೆಲೆಯಾಗಲು ಡಾ.ಆಚಾರ್ಯ ಕಾರಣ ಎಂದರು. ಅಲ್ಲದೇ ನಮ್ಮ ಸ್ವಚ್ಛ ಭಾರತ ಯೋಜನೆಗೆ ಡಾ.ಆಚಾರ್ಯರು ಪುರಸಭೆಯ ಅಧ್ಯಕ್ಷರಾಗಿ ಉಡುಪಿಯಲ್ಲಿ ಕೈಗೊಂಡ ಯೋಜನೆಯೇ ಸ್ಪೂರ್ತಿಯಾಗಿದೆ ಎಂದರು.

► ಉಡುಪಿಯ ಕುರಿತಂತೆ ಸಾಕಷ್ಟು ಅಧ್ಯಯನ, ಪೂರ್ವತಯಾರಿ ಯೊಂದಿಗೆ ಮಾತನಾಡಿದ ಮೋದಿ, ದ್ವೈತ ಮತ ಹಾಗೂ ಕೃಷ್ಣ ಮಠದ ಸ್ಥಾಪಕ ಶ್ರೀಮಧ್ವಾಚಾರ್ಯರನ್ನೂ ಸಾಕಷ್ಟು ಬಾರಿ ಉಲ್ಲೇಖಿಸಿ ಅವರಿಂದಾಗಿಯೇ ಕರ್ನಾಟಕದಲ್ಲಿ ದಾಸ ಪರಂಪರೆ ಬೆಳೆಯಿತು ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X