Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. Udupi | ಮುಂದುವರಿದ ಮಳೆಯ...

Udupi | ಮುಂದುವರಿದ ಮಳೆಯ ಕಣ್ಣುಮುಚ್ಚಾಲೆಯಾಟ ; ರೈತರಿಗೆ ಸಂಕಟ

ವಾರ್ತಾಭಾರತಿವಾರ್ತಾಭಾರತಿ3 July 2026 10:30 PM IST
share
Udupi | ಮುಂದುವರಿದ ಮಳೆಯ ಕಣ್ಣುಮುಚ್ಚಾಲೆಯಾಟ ; ರೈತರಿಗೆ ಸಂಕಟ
ಮಳೆ ಕೊರತೆ ಕಂಡುಬಂದರೆ ಪರ್ಯಾಯ ಕ್ರಮಕ್ಕೆ ಇಲಾಖೆ ಸಲಹೆ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯ ಜೊತೆ ಜೊತೆಗೆ ಮುಂಗಾರು ಮಳೆಯ ಕೊರತೆಯೂ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಎಲ್‌ನಿನೋ ಪ್ರಭಾವದಿಂದ ಈ ಬಾರಿ ಮಳೆಯಲ್ಲಿ ಕೊರತೆ ಕಾಣಿಸಿಕೊಳ್ಳುತಿದ್ದೆ ಎಂದು ವಿಜ್ಞಾನಿಗಳು ಹಾಗೂ ಕೃಷಿ ತಜ್ಞರು ಹೇಳುತ್ತಾ ಬಂದಿದ್ದರೂ, ಪ್ರತಿ ವರ್ಷ ಮೇ-ಜೂನ್ ತಿಂಗಳಲ್ಲಿ ಭತ್ತ ಬೆಳೆಯುವ ಕೃಷಿ ಚಟುವಟಿ ಪ್ರಾರಂಭಿಸುವ ಜಿಲ್ಲೆಯ ರೈತರು ಮಾತ್ರ ಎಚ್ಚರಿಕೆಯ ಹೊರತಾಗಿಯೂ ಆತಂಕಿತರಾಗಿದ್ದಾರೆ.

ಕೃಷಿಯ ಪೂರ್ವಸಿದ್ಧತೆಗಾಗಿ ಎಪ್ರಿಲ್-ಮೇ ತಿಂಗಳಲ್ಲಿ ಬರಬೇಕಿದ್ದ ಮುಂಗಾರು ಪೂರ್ವ ಮಳೆ ಕೈಕೊಟ್ಟ ಬಳಿಕ ಜೂನ್‌ನಲ್ಲಿ ತಪ್ಪದೇ ಬರಬೇಕಿದ್ದ ಮುಂಗಾರು ಮಳೆಯಲ್ಲೂ ಶೇ.50ರಷ್ಟು ಕೊರತೆ ಕಂಡುಬಂದಿರುವುದರಿಂದ ಭತ್ತದ ನಾಟಿಗೆ ರೈತನ ಸಿದ್ಧತೆ ಆಯ ತಪ್ಪಿದೆ. ಬೆಟ್ಟು ಗದ್ದೆಯ ಆಸೆಯನ್ನು ಕೈಬಿಟ್ಟರೂ ಬಯಲು ಗದ್ದೆಯಲ್ಲೇ ಆತನಿಗೆ ಈ ಬಾರಿ ಪೂರ್ಣರೀತಿಯ ಸಿದ್ಧತೆ ನಡೆಸಲು ಸಾಧ್ಯವಾಗುತ್ತಿಲ್ಲ.

ಇದೀಗ ಕಳೆದೊಂದು ವಾರದಿಂದ ಮಳೆ ಬಿರುಸುಗೊಳ್ಳುವ ಆಸೆ ಮೂಡಿಸುತಿದ್ದಂತೆ, ಹಗಲಿಡೀ ಬಿಸಿಲು ಕಾದು ನಿರಾಶೆ ಮೂಡಿಸುತ್ತಿದೆ. ಈ ಸಮಯದಲ್ಲಿ ಸರಾಸರಿ 8ರಿಂದ 9ಸೆ.ಮಿ. ಮಳೆಯಾಗಬೇಕಿದ್ದಲ್ಲಿ ಪ್ರತಿ ದಿನ ಬರುತ್ತಿರುವುದು 2ರಿಂದ 3ಸೆ.ಮೀ. ಮಳೆ ಮಾತ್ರ. ಈಗಿನ ಸ್ಥಿತಿಯಲ್ಲಿ ಜೂನ್ ತಿಂಗಳಿನಂತೆ ಜುಲೈ ತಿಂಗಳಲ್ಲೂ ಮಳೆಯ ಕೊರತೆ ಕಂಡುಬರುವ ಸಾಧ್ಯತೆಯೇ ಅಧಿಕ.

ಕೃಷಿ ಇಲಾಖೆಯ ಆಶಾವಾದ :

ಈ ನಡುವೆ ಕೃಷಿ ಇಲಾಖೆ ರೈತರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಮಳೆ ಮೂರು ವಾರಗಳಷ್ಟು ವಿಳಂಬವಾಗಿದ್ದರೂ, ಈಗ ಉತ್ತಮ ಮಳೆಯಾಗುತ್ತಿರುವುದರಿಂದ ನಾಟಿಯೂ ಸೇರಿದಂತೆ ಕೃಷಿ ಚಟುವಟಿಕೆಗಳನ್ನು ಮುಂದುವರಿಸುವಂತೆ ಹುರಿದುಂಬಿಸುತ್ತಿದೆ. ಪ್ರಸ್ತುತ ನೇರ ಬಿತ್ತನೆ ಅಥವಾ ಡ್ರಂ ಸೀಡರ್ ಮೂಲಕ ಬಿತ್ತನೆ ಮಾಡುವುದು ಉತ್ತಮ. ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ತಳಿಗಳ ಬದಲಾವಣೆಯ ಅಗತ್ಯವಿರುವುದಿಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಸಲಹೆ ನೀಡುತ್ತಾರೆ.

ಆದರೆ ಜೂನ್ ತಿಂಗಳಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದಿರುವುದರಿಂದ ನಾಟಿ ಕಾರ್ಯಗಳು ಹಲವು ಪ್ರದೇಶಗಳಲ್ಲಿ ವಿಳಂಬಗೊಂಡಿವೆ. ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಕೃಷಿ ಮಳೆ ಆಧಾರಿತವಾಗಿರುವುದರಿಂದ, ಜೂನ್ ಮೊದಲ ವಾರದಿಂದಲೇ ಉಳುಮೆ, ಬೀಜ ಬಿತ್ತನೆ ಹಾಗೂ ನಾಟಿ ಕಾರ್ಯಗಳು ಆರಂಭವಾಗುವುದು ಸಾಮಾನ್ಯ. ಆದರೆ ಈ ಬಾರಿ ಮುಂಗಾರು ಚುರುಕುಗೊಳ್ಳಲು ವಿಳಂಬವಾದ ಕಾರಣ ಜಿಲ್ಲೆಯ ಅನೇಕ ಭಾಗಗಳಲ್ಲಿ ಗದ್ದೆಗಳು ಇನ್ನೂ ನೀರಿನಿಂದ ತುಂಬಿಲ್ಲ. ಪರಿಣಾಮವಾಗಿ ರೈತರು ಮಳೆಯ ನಿರೀಕ್ಷೆಯಲ್ಲೇ ಕಾಲ ಕಳೆಯುವಂತಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ, ಹೆಬ್ರಿ, ಕಾರ್ಕಳ, ಕುಂದಾಪುರ, ಬೈಂದೂರು ಮತ್ತು ಕಾಪು ತಾಲೂಕುಗಳ ಹಲವು ಗ್ರಾಮಗಳಲ್ಲಿ ರೈತರು ಗದ್ದೆಗಳನ್ನು ಸಿದ್ಧಪಡಿಸಿಕೊಂಡಿದ್ದರೂ, ಸಮರ್ಪಕ ನೀರಿನ ಕೊರತೆಯಿಂದ ನಾಟಿ ಕಾರ್ಯ ಆರಂಭಿಸಲು ಸಾಧ್ಯವಾಗಿಲ್ಲ. ಕೆಲವು ಪ್ರದೇಶಗಳಲ್ಲಿ ಬೀಜ ಬಿತ್ತನೆ ನಡೆಸಲಾಗಿದ್ದರೂ, ನಿರಂತರ ಮಳೆಯ ಕೊರತೆಯಿಂದ ಸಸಿಗಳ ಬೆಳವಣಿಗೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೈತರು ಅಭಿಪ್ರಾಯಪಡುತ್ತಿದ್ದಾರೆ.

ಮಳೆ ಕೊರತೆ ಮುಂದುವರಿದರೆ...? :

ಕೃಷಿ ಇಲಾಖೆ ಅಧಿಕಾರಿಗಳು ಹೇಳುವಂತೆ ಜಿಲ್ಲೆಯಲ್ಲಿ ಜುಲೈ ತಿಂಗಳ ಮೊದಲಾರ್ಧದವರೆಗೆ ನಾಟಿ ಕಾರ್ಯ ಕೈಗೊಳ್ಳಲು ಅವಕಾಶವಿದೆ. ಮುಂದಿನ ವಾರಗಳಲ್ಲಿ ಉತ್ತಮ ಮಳೆಯಾದರೆ ರೈತರು ವೇಗವಾಗಿ ನಾಟಿ ಕಾರ್ಯ ಕೈಗೊಳ್ಳಲು ಸಾಧ್ಯವಿದೆ. ಕೃಷಿ ವಿಜ್ಞಾನಿಗಳ ಅಭಿಪ್ರಾಯದಂತೆ, ಮಳೆ ವಿರಳವಾದ ಸಂದರ್ಭಗಳಲ್ಲಿ ಕಡಿಮೆ ಅವಧಿಯಲ್ಲಿ ಬೆಳೆಯುವ ಭತ್ತದ ತಳಿಗಳನ್ನು ಆಯ್ಕೆ ಮಾಡುವುದು ರೈತರಿಗೆ ಅನುಕೂಲಕರ. ಜೊತೆಗೆ ಗದ್ದೆಗಳಲ್ಲಿ ಲಭ್ಯವಿರುವ ತೇವಾಂಶವನ್ನು ಸಂರಕ್ಷಿಸುವ ಕ್ರಮಗಳನ್ನು ಅನುಸರಿಸಿದರೆ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಒಂದು ವೇಳೆ ಮುಂದಿನ ದಿನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೇ ಇದ್ದರೆ ಪರ್ಯಾಯ ಅಲ್ಪಾವಧಿ ತಳಿಗಳ ಬಿತ್ತನೆ ಮಾಡಬಹುದು ಎಂದು ಇಲಾಖೆಯ ಅಧಿಕಾರಿಗಳು ರೈತರಿಗೆ ಸಲಹೆ ನೀಡುತ್ತಾರೆ. ಇಲಾಖೆಯಲ್ಲಿ ಅಲ್ಪಾವಧಿ ತಳಿಗಳಾದ ಸಹ್ಯಾದ್ರಿ ಕೆಂಪುಮುಕ್ತಿ, ಜಯ, ಜ್ಯೋತಿ, ಎಂ.ಓ-23, ಉಮಾ ತಳಿಗಳ ಬಿತ್ತನೆ ಬೀಜಗಳು ಸಾಕಷ್ಟು ಲಭ್ಯವಿದೆ. ಅಲ್ಲದೇ ಮಳೆಯ ಕೊರತೆ ಸಂದರ್ಭದಲ್ಲಿ ನೀರನ್ನು ಗದ್ದೆಯಲ್ಲಿ ಉಳಿಸಿಕೊಳ್ಳಲು ಬದುಗಳನ್ನು ಬಲಪಡಿಸಬಹುದು ಎಂದು ವಿವರಿಸಿದರು.

ರೈತರು ಯಾವುದೇ ಸಂದರ್ಭದಲ್ಲಿ ಸ್ಥಳೀಯ ಕೃಷಿ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು, ಹವಾಮಾನ ಮುನ್ಸೂಚನೆ ಹಾಗೂ ತಾಂತ್ರಿಕ ಸಲಹೆಗಳನ್ನು ಪಡೆಯಬಹುದು ಎಂದು ಇಲಾಖಾಧಿಕಾರಿಗಳು ರೈತರಿಗೆ ಭರವಸೆ ತುಂಬುತ್ತಾರೆ.

37,742 ಹೆಕ್ಟೇರ್‌ನಲ್ಲಿ ಭತ್ತದ ಕೃಷಿಯ ಗುರಿ :

ಕಳೆದ ವರ್ಷ ಜಿಲ್ಲೆಯಲ್ಲಿ 35,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿಯ ಗುರಿಯನ್ನು ಹಾಕಿಕೊಂಡಿದ್ದರೂ, 25,596 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೇಸಾಯ ಮಾಡಲು ಸಾಧ್ಯವಾಗಿತ್ತು.

ಈ ಬಾರಿ ಜಿಲ್ಲೆಯ 37,742 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಮಾಡುವ ಗುರಿ ಇದೆ. ಎಲ್ಲವೂ ನಿಗದಿಯಾದಂತೆ ನಡೆದಿದ್ದರೆ ಜುಲೈ ಮೊದಲನೇ ವಾರದಲ್ಲಿ 12,000ರಿಂದ 12,500 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಮುಗಿದಿರಬೇಕಿತ್ತು. ಆದರೆ ಈ ಬಾರಿ ಆಗಿರುವುದು 9031 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಎಂದು ಕೃಷಿ ಇಲಾಖೆಯ ಮಾಹಿತಿ ತಿಳಿಸುತ್ತದೆ.

ಬಿತ್ತನೆ ಬೀಜದ ಲಭ್ಯತೆ :

ಜಿಲ್ಲೆಯಲ್ಲಿ ಈಗಾಗಲೇ 1898.50 ಕ್ವಿಂಟಾಲ್ ಎಂ.ಓ-4 ಹಾಗೂ 9.50 ಕ್ವಿಂಟಾಲ್ ಜ್ಯೋತಿ ತಳಿಯ ಭತ್ತದ ಬೀಜಗಳನ್ನು ವಿತರಿಸಲಾಗಿದೆ. ಇನ್ನು 175.25 ಕ್ವಿಂಟಾಲ್ ಎಂ.ಓ.-4 ಹಾಗೂ 15.50 ಕ್ವಿಂಟಾಲ್ ಜ್ಯೋತಿ ಭತ್ತದ ಬೀಜ ಲಭ್ಯವಿರುತ್ತದೆ.

ರಸಗೊಬ್ಬರ ಲಭ್ಯತೆ :

ಜಿಲ್ಲೆಯಲ್ಲಿ ಹಂಗಾಮು ಬೇಡಿಕೆ 10388 ಮೆಟ್ರಿಕ್ ಟನ್. ಜುಲೈ ತಿಂಗಳ ಅಂತ್ಯದವರೆಗಿನ ಬೇಡಿಕೆ 6907ಮೆ.ಟನ್ ಆಗಿದ್ದು, ಸದ್ಯಕ್ಕೆ 5014 ಮೆ.ಟನ್ ಗೊಬ್ಬರ ದಾಸ್ತಾನಿದೆ ಎಂದು ಇಲಾಖೆ ತಿಳಿಸಿದೆ.

ಮಳೆಯ ಕೊರತೆಯಿಂದ ಈ ಬಾರಿ ಬೆಟ್ಟುಗದ್ದೆ ಬಿಡಿ, ಬಯಲುಗದ್ದೆಯಲ್ಲೇ ನಾಟಿ ಮಾಡಲು ಸಾಧ್ಯವಾಗಿಲ್ಲ. ಈಗಂತೂ ಯಾಂತ್ರಿಕ ಕೃಷಿ ಹಾಗೂ ಕಾರ್ಮಿಕರ ಕೊರತೆಯಿಂದ ಸಾಂಪ್ರದಾಯಿಕ ಕೃಷಿ ಕಷ್ಟ. ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ನಾನು ಬೀಜ ಮೊಳಕೆ ಬರಿಸಿ ನೇರ ಬಿತ್ತನೆ ಮಾಡುತಿದ್ದೇನೆ. ಇದರಲ್ಲಿ ನೀರಿನ ನಿರ್ವಹಣೆ ಮಾಡಬೇಕು ಹಾಗೂ ಇಳಿವರಿ ಸ್ವಲ್ಪ ಕಡಿಮೆ. ಆದರೆ ಅದು ಅನಿವಾರ್ಯ.

-ಶಿವರಾಮ್, ಬಂಡಿಮಠ ಬಾರಕೂರು.


Tags

Udupi
share
ವಾರ್ತಾಭಾರತಿ
ವಾರ್ತಾಭಾರತಿ
Next Story
X