ಉಡುಪಿ: ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು

ಉಡುಪಿ, ಆ.5: ಅಜ್ಜರಕಾಡುವಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಪೈಪ್‌ಲೈನ್ ಜೋಡಿಸಲು ಗುತ್ತಿಗೆದಾರರು ತಂದಿಸಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಈ ಸಂಬಂಧ ಆಸ್ಪತ್ರೆಯ ಸಿಸಿ ಕ್ಯಾಮೆರಗಳನ್ನು ಪರಿಶೀಲನೆ ನಡೆಸಿದಾಗ ಜು.20ರಂದು ಜಾವೀದ್, ಲಿಯಾಖತ್ ಮತ್ತು ಮತ್ತೊಬ್ಬ ವ್ಯಕ್ತಿ ಸೇರಿ ಸ್ಟೋರ್ ರೂಮಿನಲ್ಲಿಟ್ಟಿದ್ದ ಕಾಪರ್ ಪೈಪ್, ಫಿಟಿಂಗ್ಸ್ ಮತ್ತು ಹಳೆ ಕಾಪರ್ ಸ್ಟ್ರಿಪ್‌ಗಳನ್ನು ಕಾರಿನಲ್ಲಿ ತುಂಬಿಕೊಂಡು ಕಳವು ಮಾಡಿಕೊಂಡು ಹೋಗಿರುವ ದೃಶ್ಯ ಕಂಡು ಬಂದಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





