ಉಡುಪಿ | ಜೂ.6ರಂದು ತ್ರೈಮಾಸಿಕ ಅಂಚೆ ಅದಾಲತ್

ಉಡುಪಿ : ಅಂಚೆ ಇಲಾಖೆ ವತಿಯಿಂದ ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಜೂ.6ರಂದು ಅಪರಾಹ್ನ 3:30ಕ್ಕೆ ತ್ರೈಮಾಸಿಕ ಅಂಚೆ ಅದಾಲತ್ ನಡೆಯಲಿದೆ.
ಅಂಚೆ ಗ್ರಾಹಕರು ತಮ್ಮ ದೂರು ಮತ್ತು ಸಲಹೆಗಳನ್ನು ಜೂ.3ರ ಒಳಗೆ ಅಂಚೆ ಅಧೀಕ್ಷಕರ ಕಚೇರಿಗೆ ಸಲ್ಲಿಸುವಂತೆ ಮತ್ತು ಅದಾಲತ್ ನಡೆಯುವ ದಿನದಂದು ಅಂಚೆ ಗ್ರಾಹಕರು ಹಾಜರಿದ್ದು, ಸಮಕ್ಷಮ ಚರ್ಚಿಸಿ, ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.
Next Story





