ಉಡುಪಿ ರೈಲ್ವೆ ಯಾತ್ರಿ ಸಂಘದ ಸಭೆ

ಉಡುಪಿ, ನ.22: ಉಡುಪಿ ರೈಲ್ವೆ ಯಾತ್ರಿ ಸಂಘದ ಆಡಳಿತ ಮಂಡಳಿಯ ಸಭೆಯು ಮಂಗಳವಾರ ಉಡುಪಿಯ ಹಿಂದಿ ಪ್ರಚಾರ ಸಮಿತಿ ಸಭಾಂಗಣದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಧೀರಜ್ ಶಾಂತಿ ವಹಿಸಿದ್ದರು. ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ಮಹಾಸಭೆಯ ಬಳಿಕ ಸಂಘದ ಚಟುವಟಿಕೆಗಳನ್ನು ವಿವರವಾಗಿ ಸಭೆಗೆ ತಿಳಿಸಿದರು. ರೈಲ್ವೆ ಪ್ರಯಾಣಿಕರ ಮತ್ತು ಉಡುಪಿ ರೈಲ್ವೆ ನಿಲ್ದಾಣದ ಮೂಲಭೂತ ಸೌಕರ್ಯಗಳ ಸುದೀರ್ಘ ಸಮಾಲೋಚನೆ ನಡೆಸಿ ಶಾಸಕರು ಮತ್ತು ಸಂಸದರ ಮೂಲಕ ಕ್ರಮ ಕೈಗೊಳ್ಳಲು ಹಾಗು ಈ ಹಿಂದೆ ನೀಡಿದ ಮನವಿಗಳ ಬಗ್ಗೆ ಪರಾಮರ್ಶೆ ನಡೆಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಕೋಶಾಧಿಕಾರಿ ಅಜಿತ್ ಕುಮಾರ್ ಶೆಣೈ, ಉಪಾಧ್ಯಕ್ಷ ಮಧುಸೂದನ್ ಹೇರೂರು, ನಿರ್ದೇಶಕರುಗಳಾದ ಜಾನ್ ರೆಬೆಲ್ಲೊ, ಜಯಚಂದ್ರ ರಾವ್, ಅಪ್ರಾಯ ಶೆಟ್ಟಿಗಾರ್ ಪರ್ಕಳ, ಪಿ.ಎನ್.ರವೀಂದ್ರ ರಾವ್, ಸಿ.ಎಸ್.ರಾವ್, ಪ್ಲಾಸಿಡ್ ಜೆ.ಎ. ಮತ್ತಿತರರು ಉಪಸ್ಥಿತರಿದ್ದರು.
Next Story





