Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿ| 4 ತಿಂಗಳು ನಿರಂತರವಾಗಿ ಬಂದರೂ...

ಉಡುಪಿ| 4 ತಿಂಗಳು ನಿರಂತರವಾಗಿ ಬಂದರೂ ಮಳೆ ಪ್ರಮಾಣದಲ್ಲಿ ಇಳಿಕೆ

ಬಿ.ಬಿ ಶೆಟ್ಟಿಗಾರ್‌ಬಿ.ಬಿ ಶೆಟ್ಟಿಗಾರ್‌2 Oct 2025 6:00 PM IST
share
ಉಡುಪಿ| 4 ತಿಂಗಳು ನಿರಂತರವಾಗಿ ಬಂದರೂ ಮಳೆ ಪ್ರಮಾಣದಲ್ಲಿ ಇಳಿಕೆ
2025ರಲ್ಲಿ ಮಳೆಗಾಲದಲ್ಲಿ ಶೇ.4, ವರ್ಷದಲ್ಲಿ ಶೇ.21 ಅಧಿಕ ಮಳೆ

ಉಡುಪಿ, ಅ.2: ಕಳೆದೊಂದು ದಶಕಕ್ಕೆ ಹೋಲಿಸಿದರೆ, ಉಡುಪಿ ಜಿಲ್ಲೆಯಲ್ಲಿ ಈ ಬಾರಿಯ ಮಳೆಗಾಲ ವಿಭಿನ್ನ‌ ವಾಗಿತ್ತು. ಮೇ ತಿಂಗಳಿನಿಂದ ಸತತ ಐದು ತಿಂಗಳ ಕಾಲ ಮಳೆ ನಿರಂತರವಾಗಿ ಸುರಿದರೂ, ಒಟ್ಟಾರೆ ಪ್ರಮಾಣ ವನ್ನು ಗಮನಿಸಿದರೆ ಅದು ಕಳೆದ ವರ್ಷಕ್ಕಿಂತ ಗಣನೀಯವಾಗಿ ಕಡಿಮೆಯಾಗಿತ್ತು.

ಅದರಲ್ಲೂ ಮಳೆಗಾಲದ ನಾಲ್ಕು ತಿಂಗಳಲ್ಲಿ - ಜೂನ್‌ನಿಂದ ಸೆಪ್ಟಂಬರ್ ವರೆಗೆ- ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿದರೂ (ಸೆಪ್ಚಂಬರ್ ತಿಂಗಳಲ್ಲಿ ಕೆಲವು ದಿನಗಳನ್ನು ಹೊರತು ಪಡಿಸಿ) ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 700ಮಿ.ಮೀ. ಮಳೆ ಕಡಿಮೆ ಬಿದ್ದಿದೆ. ಕಳೆದ ವರ್ಷ ವಾಡಿಕೆ ಮಳೆಗಿಂತ ಶೇ.13ರಷ್ಟು ಅಧಿಕ ಮಳೆ ಸುರಿದಿದ್ದರೆ ಈ ಬಾರಿ ಬಿದ್ದಿರುವುದು ವಾಡಿಕೆಗಿಂತ ಶೇ.4ರಷ್ಟು ಅಧಿಕ ಮಾತ್ರ.

ಈ ಬಾರಿ ಮಳೆ ನಿರಂತರವಾಗಿ ಸುರಿದಿದ್ದರೂ, ಜಿಲ್ಲೆಯಲ್ಲಿ ಒಂದೇ ಒಂದು ದೊಡ್ಡ ಪ್ರಮಾಣದ ನೆರೆ ಬಂದಿರಲಿಲ್ಲ. ಆರಂಭಿಕ ದಿನಗಳಲ್ಲಿ ಬೈಂದೂರು, ಕುಂದಾಪುರ ಭಾಗದಲ್ಲಿ ಒಂದೆರಡು ದಿನ ನೆರೆ ಕಾಣಿಸಿಕೊಂಡರೂ, ಉಡುಪಿ ಯಲ್ಲಿ ನೆರೆ ಪ್ರದೇಶವೆನಿಸಿದ ಕೃಷ್ಣಮಠದ ಸುತ್ತಮುತ್ತ, ಕಲ್ಸಂಕ, ಉಪ್ಪೂರು ಪ್ರದೇಶಗಳಲ್ಲಿ ಈ ಬಾರಿ ನೆರೆಯ ಸದ್ದೇ ಇರಲಿಲ್ಲ. ನೆರೆ- ಪ್ರವಾಹ ಇಲ್ಲದಿದ್ದರೂ ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಅತ್ಯಧಿಕ ರಜೆ ಈ ಬಾರಿಯ ಮಳೆಗಾಲದಲ್ಲಿ ದೊರಕಿದೆ.!

ಕಳೆದ ವರ್ಷ ಮಳೆಗಾಲದ ನಾಲ್ಕು ತಿಂಗಳಲ್ಲಿ ಒಟ್ಟು 4813 ಮಿ.ಮೀ. ಮಳೆಯಾಗಿದ್ದರೆ, ಈ ಬಾರಿ ಬಿದ್ದಿರುವುದು 4175ಮಿ.ಮೀ. ಮಾತ್ರ. ಇದು ವಾಡಿಕೆ ಮಳೆಯಾದ 4022ಮಿ.ಮೀ.ಗೆ ಹೋಲಿಸಿದರೆ ಕ್ರಮವಾಗಿ ಶೇ.13 ಹಾಗೂ ಶೇ.4 ಅಧಿಕವಾಗಿದೆ. ಇಡೀ ಜಿಲ್ಲೆಯಲ್ಲೇ ಅತ್ಯಧಿಕ ಮಳೆ ಬೀಳ ಬೇಕಿದ್ದ ಹೆಬ್ರಿ ತಾಲೂಕಿನಲ್ಲೇ ಈ ಬಾರಿ ವಾಡಿಕೆ ಮಳೆಯಲ್ಲಿ ಶೇ.11ರಷ್ಟು ಕೊರತೆ ಕಾಣಿಸಿಕೊಂಡಿದೆ. ಅಲ್ಲಿ 5268ಮಿ.ಮೀ. ಮಳೆಯಾಗಬೇಕಿದ್ದಲ್ಲಿ ಬಿದ್ದಿರುವುದು 4675ಮಿ.ಮೀ ಮಳೆ ಮಾತ್ರ ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಾಕೃತಿಕ ವಿಕೋಪ ನಿಯಂತ್ರಣ ಕೇಂದ್ರದ ಅಂಕಿಅಂಶ ತಿಳಿಸಿವೆ.

ಸತತ ಮೂರು ವರ್ಷಗಳಿಂದ ಅಂದರೆ 2021ರಿಂದ 2023ರವರೆಗೆ ಮಳೆಗಾಲದ ನಾಲ್ಕು ತಿಂಗಳಲ್ಲಿ (ಜೂ.1ರಿಂದ ಸೆಪ್ಟಂಬರ್ 30ರವರೆಗೆ) ಮಳೆಯ ಕೊರತೆ ಅನುಭವಿಸಿದ್ದ ಉಡುಪಿ ಜಿಲ್ಲೆ 2024ರಲ್ಲಿ ಮೊದಲ ಬಾರಿ ಅಧಿಕ ಮಳೆ (ಶೇ.12) ಪಡೆದಿತ್ತು. 2021ರಲ್ಲಿ 3444ಮಿ.ಮೀ. ಮಳೆ ಬೀಳುವ ಮೂಲಕ ಶೇ.14ರಷ್ಟು ಕೊರತೆ, 2022ರಲ್ಲಿ 3998ಮಿ.ಮೀ. ಮಳೆ ಬಿದ್ದು ಶೇ.1ರ ಕೊರತೆ ಹಾಗೂ 2023ರಲ್ಲಿ 3156 ಮಿ.ಮೀ ಮಳೆಯಾಗಿ ಶೇ.22ರಷ್ಟು ಕೊರತೆ ಎದುರಾಗಿತ್ತು.

ಇಡೀ ವರ್ಷದ ಮಳೆಯಲ್ಲಿ ಸುಧಾರಣೆ: 2025ರ ಜನವರಿ1ರಿಂದ ಸೆ.30ರವರೆಗೆ ಜಿಲ್ಲೆಯಲ್ಲಿ ಬಿದ್ದ ಮಳೆಯ ಪ್ರಮಾಣವನ್ನು ನೋಡಿದಾಗ ವಾಡಿಕೆಗಿಂತ ಶೇ.21ರಷ್ಟು ಅಧಿಕ ಮಳೆಯಾಗಿದೆ. ಹೆಬ್ರಿಯೂ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಈ ಸಲ ಅಧಿಕ ಮಳೆಯಾಗಿದೆ. ಈ ಅವಧಿಯ ವಾಡಿಕೆ ಮಳೆ 4223ಮೀ.ಮೀ. ಆಗಿದ್ದರೆ ಈ ಸಲ 5114 ಮಿ.ಮೀ. ಮಳೆ ಸುರಿದಿದೆ. ಮೇ ತಿಂಗಳಲ್ಲಿ ಸುರಿದ ದಾಖಲೆಯ ಧಾರಾಕಾರ ಮಳೆಯೇ (836ಮಿ.ಮೀ.) ಇದಕ್ಕೆ ಕಾರಣ ಎನ್ನಬಹುದು. ಮೇ ತಿಂಗಳಲ್ಲಿ ಈ ಬಾರಿ ಶೇ.408ರಷ್ಟು ಅಧಿಕ ಮುಂಗಾರು ಪೂರ್ವ ಮಳೆಯಾಗಿತ್ತು.

ಜಿಲ್ಲೆಯ ಏಳು ತಾಲೂಕುಗಳಿಗೆ ಹೋಲಿಸಿ ನೋಡಿದರೆ ಈ ಬಾರಿ ಕುಂದಾಪುರ ತಾಲೂಕಿನಲ್ಲಿ ಅತ್ಯಧಿಕ ಮಳೆಯಾ ಗಿದೆ. ಮಳೆಗಾಲದ ನಾಲ್ಕು ತಿಂಗಳಲ್ಲಿ ಇಲ್ಲಿ ಶೇ.26ರಷ್ಟು ಅಧಿಕ ಮಳೆಯಾಗಿದ್ದರೆ, ಜನವರಿ ತಿಂಗಳಿನಿಂದ ಸೆಪ್ಟಂಬರ್‌ವರೆಗೆ ಅಂಕಿಅಂಶವನ್ನು ನೋಡಿದಾಗ ಶೇ.42ರಷ್ಟು ಅಧಿಕ ಮಳೆ ಸುರಿದಿದೆ. ಒಟ್ಟಾರೆಯಾಗಿ ಇಲ್ಲಿ 3553ಮಿ.ಮೀ. ವಾಡಿಕೆ ಮಳೆಯಾಗಿದ್ದರೆ, ಈ ಬಾರಿ ಬಿದ್ದಿರುವುದು 5039 ಮಿ.ಮೀ. ಆಗಿದೆ.

ಉಳಿದಂತೆ ಮಳೆಗಾಲದ ನಾಲ್ಕು ತಿಂಗಳಲ್ಲಿ ಕಾರ್ಕಳದಲ್ಲಿ -1, ಉಡುಪಿಯಲ್ಲಿ +10, ಬೈಂದೂರಿನಲ್ಲಿ +15, ಬ್ರಹ್ಮಾವರದಲ್ಲಿ +6, ಕಾಪುವಿನಲ್ಲಿ +7ರಷ್ಟು ಅಧಿಕ ಮಳೆ ಬಿದ್ದಿದೆ. ಇನ್ನು ವರ್ಷದ ಮೊದಲ 9 ತಿಂಗಳಲ್ಲಿ ಕಾರ್ಕಳದಲ್ಲಿ +19, ಉಡುಪಿಯಲ್ಲಿ +30, ಬೈಂದೂರಿನಲ್ಲಿ +30, ಬ್ರಹ್ಮಾವರದಲ್ಲಿ +26, ಕಾಪುವಿನಲ್ಲಿ +29 ಹಾಗೂ ಹೆಬ್ರಿಯಲ್ಲಿ +3ರಷ್ಟು ಅಧಿಕ ಮಳೆಯಾಗಿದೆ.

ಈ ಬಾರಿ ಸೆಪ್ಟಂಬರ್ ತಿಂಗಳ ಮಳೆಯನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ತಿಂಗಳ ವಾಡಿಕೆ ಮಳೆ 405ಮಿ.ಮೀ ಆಗಿದ್ದು, ಈ ಬಾರಿ 412 ಮಿ.ಮೀ. ಮಳೆ ಬೀಳುವ ಮೂಲಕ ಶೇ.2 ಅಧಿಕ ಮಳೆಯಾಗಿದೆ. ಕಾರ್ಕಳದಲ್ಲಿ +3, ಕುಂದಾಪುರದಲ್ಲಿ +6, ಉಡುಪಿಯಲ್ಲಿ -11, ಬೈಂದೂರಿ ನಲ್ಲಿ +9, ಬ್ರಹ್ಮಾವರದಲ್ಲಿ -11, ಕಾಪುವಲ್ಲಿ +1 ಹಾಗೂ ಹೆಬ್ರಿಯಲ್ಲಿ -6ರಷ್ಟು ಮಳೆಯಾಗಿದೆ.

ಈ ವರ್ಷ ಸೆಪ್ಟೆಂಬರ್ ತಿಂಗಳ ಕೊನೆಯವರೆಗೂ ಮಳೆ ಬಿದ್ದಿರುವುದರಿಂದ ಕುಡಿಯುವ ನೀರು ಹಾಗೂ ನೀರಿನ ಇತರ ಬಳಕೆಗೆ ಹೆಚ್ಚು ಅನುಕೂಲಕರ ವಾಗಿದೆ. ಅಕ್ಟೋಬರ್ ತಿಂಗಳಲ್ಲೂ ಮಳೆ ಮುಂದುವರಿದಿರುವುದು ಹಾಗೂ ಹಿಂಗಾರು ಋತುವಿನಲ್ಲೂ ಮಳೆಯ ಸಾದ್ಯತೆಯ ಹಿನ್ನೆಲೆಯಲ್ಲಿ ಮುಂದಿನ ಬೇಸಿಗೆಗೆ ಕುಡಿಯುವ ನೀರಿನ ಅಭಾವ ಕಾಣಿಸಿಕೊಳ್ಳಲಾರದೆಂಬ ನಿರೀಕ್ಷೆ ಮೂಡಿದೆ.

*ಜಿಲ್ಲೆಯಲ್ಲಿ ಜನವರಿಯಿಂದ ಸೆಪ್ಟಂಬರವರೆಗೆ ಬಿದ್ದ ಮಳೆ ವಿವರ

ತಾಲೂಕು ವಾಡಿಕೆ ಮಳೆ ಬಿದ್ದ ಮಳೆ ಪ್ರಮಾಣ(ಶೇ.)

ಕಾರ್ಕಳ 4339ಮಿ.ಮೀ. 5155ಮಿ.ಮೀ +19

ಕುಂದಾಪುರ 3553ಮಿ.ಮೀ. 5039ಮಿ.ಮೀ. +42

ಉಡುಪಿ 3581ಮಿ.ಮೀ. 4645ಮಿ.ಮೀ. +30

ಬೈಂದೂರು 4161ಮಿ.ಮೀ. 5429ಮಿ.ಮೀ. +30

ಬ್ರಹ್ಮಾವರ 3728ಮಿ.ಮೀ. 4693ಮಿ.ಮೀ. +26

ಕಾಪು 3454ಮಿ.ಮೀ. 4477ಮಿ.ಮೀ. +29

ಹೆಬ್ರಿ 5471ಮಿ.ಮೀ. 5619ಮಿ.ಮೀ. +03

ಜಿಲ್ಲೆ ಸರಾಸರಿ 4223ಮಿ.ಮೀ. 5114ಮಿ.ಮೀ. +21

*ಮಳೆಗಾಲದ ನಾಲ್ಕು ತಿಂಗಳಲ್ಲಿ (ಜೂ.-ಸೆ.)ಬಿದ್ದ ಮಳೆ ವಿವರ

ತಾಲೂಕು ವಾಡಿಕೆ ಮಳೆ ಬಿದ್ದ ಮಳೆ ಪ್ರಮಾಣ

ಕಾರ್ಕಳ 4116ಮಿ.ಮೀ. 4057ಮಿ.ಮೀ -01

ಕುಂದಾಪುರ 3354ಮಿ.ಮೀ. 4240ಮಿ.ಮೀ. +26

ಉಡುಪಿ 3367ಮಿ.ಮೀ. 3696ಮಿ.ಮೀ. +10

ಬೈಂದೂರು 3941ಮಿ.ಮೀ. 4526ಮಿ.ಮೀ. +15

ಬ್ರಹ್ಮಾವರ 3526ಮಿ.ಮೀ. 3737ಮಿ.ಮೀ. +06

ಕಾಪು 3216ಮಿ.ಮೀ. 3442ಮಿ.ಮೀ. +07

ಹೆಬ್ರಿ 5267ಮಿ.ಮೀ. 4675ಮಿ.ಮೀ. -11

ಜಿಲ್ಲೆ ಸರಾಸರಿ 4022ಮಿ.ಮೀ. 4175ಮಿ.ಮೀ. +04

share
ಬಿ.ಬಿ ಶೆಟ್ಟಿಗಾರ್‌
ಬಿ.ಬಿ ಶೆಟ್ಟಿಗಾರ್‌
Next Story
X