Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿ: ಮಳೆಯ ಕಣ್ಣುಮುಚ್ಚಾಲೆ; ಡೆಂಗಿ...

ಉಡುಪಿ: ಮಳೆಯ ಕಣ್ಣುಮುಚ್ಚಾಲೆ; ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹರಸಾಹಸ

ವಾರ್ತಾಭಾರತಿವಾರ್ತಾಭಾರತಿ18 July 2026 9:23 PM IST
share
ಉಡುಪಿ: ಮಳೆಯ ಕಣ್ಣುಮುಚ್ಚಾಲೆ; ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹರಸಾಹಸ

ಉಡುಪಿ, ಜು.18: ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆಯೊಂದಿಗೆ ಬಿಸಿಲು-ಮಳೆ ಸಹ ಕಣ್ಣುಮುಚ್ಚಾಲೆಯಾಡು ತಿದ್ದು, ಇಂಥ ವಾತಾವರಣದಲ್ಲಿ ಡೆಂಗಿ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ. ಸೊಳ್ಳೆಗಳ ನಿರ್ಮೂಲನ ದೊಂದಿಗೆ, ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸಿ ಸ್ವಚ್ಛತೆಗೆ ಆದ್ಯತೆ ನೀಡಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ.

ಮುಂಗಾರು ಮಳೆ ನಿರಂತರವಾಗಿದ್ದರೆ ಡೆಂಗಿಯಂಥ ರೋಗದ ನಿಯಂತ್ರಣ ಸುಲಭ. ಆದರೆ ಮಳೆ ಬಿಟ್ಟು ಬಿಟ್ಟು ಬರುತಿದ್ದರೆ, ಅಲ್ಲಲ್ಲಿ ನೀರು ನಿಂತು ಲಾರ್ವಾ ಉತ್ಪತ್ತಿ ಹಾಗೂ ಸೊಳ್ಳೆಗಳ ಪ್ರಮಾಣ ಹೆಚ್ಚಾಗಿ ಡೆಂಗಿ ರೋಗಿಗಳ ಸಂಖ್ಯೆ ಸುಲಭದಲ್ಲಿ ಏರಿಕೆಯಾಗುತ್ತವೆ. ಆದರೆ ಕಳೆದ ನಾಲ್ಕೈದು ದಿನಗಳಲ್ಲಿ ಮಳೆ ಕಡಿಮೆಯಾದ ಕಾರಣ ಡೆಂಗಿ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ತಿಳಿಸಿದ್ದಾರೆ.

ಇಂದು ಜಿಲ್ಲೆಯಲ್ಲಿ ಕೇವಲ ಐದು ಡೆಂಗಿ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಈ ವರ್ಷದ ಜನವರಿಯಿಂದ ಇಂದಿನವರೆಗೆ ಜಿಲ್ಲೆಯಲ್ಲಿ ವರದಿಯಾದ ಡೆಂಗಿ ಪ್ರಕರಣಗಳ ಸಂಖ್ಯೆ 303 ಆಗಿದೆ. ಇವರಲ್ಲಿ 252 ಪ್ರಕರಣ ಸ್ಥಳೀಯರಾಗಿದ್ದರೆ, 51 ಪ್ರಕರಣ ವಲಸೆ ಕಾರ್ಮಿಕರದ್ದು. ಇವರಲ್ಲಿ ಅಧಿಕಾಂಶ ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದಾರೆ ಎಂದು ಡಾ.ಹುಬ್ಬಳ್ಳಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ವರದಿಯಾದ 303 ಪ್ರಕರಣಗಳಲ್ಲಿ 127 ಸರಕಾರಿ ಆಸ್ಪತ್ರೆಗಳಲ್ಲಿ ವರದಿಯಾಗಿದ್ದರೆ ಉಳಿದ 176 ಖಾಸಗಿ ಆಸ್ಪತ್ರೆಗಳಿಂದ ವರದಿಯಾಗಿತ್ತು. ಜುಲೈ ಎರಡನೇ ವಾರದವರೆಗೆ ಡೆಂಗಿ ಪ್ರಕರಣಗಳಲ್ಲಿ ಏರಿಕೆ ಕಂಡಬಂತಾದರೂ ಬಳಿಕ ತ್ವರಿತ, ಪರಿಣಾಮಕಾರಿ ಕ್ರಮಗಳಿಂದ ಕೂಡಲೇ ಅವುಗಳನು ನಿಯಂತ್ರಣಕ್ಕೆ ತರಲಾಗಿದೆ ಎಂದು ಡಾ.ಹುಬ್ಬಳ್ಳಿ ವಿವರಿಸಿದರು.

ವಿಶೇಷವೆಂದರೆ ಜಿಲ್ಲೆಯಲ್ಲಿ ವರದಿಯಾಗಿರುವ 303 ಡೆಂಗಿ ಪ್ರಕರಣಗಳಲ್ಲಿ 13 ಪ್ರಕರಣಗಳು ಕುಂದಾಪುರದಿಂದ ವರದಿಯಾಗಿದ್ದರೆ, 16 ಕಾರ್ಕಳದಿಂದ ವರದಿಯಾಗಿದೆ. ಉಳಿದ ಶೇ.90ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿ ರುವುದು ಉಡುಪಿಯಿಂದ. ಅದರಲ್ಲೂ ಗ್ರಾಮೀಣ ಭಾಗ ದಿಂದ 81 ಪ್ರಕರಣ ವರದಿಯಾಗಿದ್ದರೆ, ನಗರ ಪ್ರದೇಶದಿಂದ 193 ಪ್ರಕರಣ ವರದಿಯಾಗಿವೆ.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಧಿಕಾಂಶ ಡೆಂಗಿ ಪ್ರಕರಣಗಳು ಕಂಡುಬಂದಿದೆ. ಉಡುಪಿ ನಗರಸಭಾ ವ್ಯಾಪ್ತಿ ಯಿಂದ ಹೊರಗೆ, ಕುಂದಾಪುರ, ಕಾರ್ಕಳಗಳಲ್ಲಿ ತೀರಾ ವಿರಳ ಸಂಖ್ಯೆಯ ಪ್ರಕರಣಗಳು ಕಂಡುಬಂದಿವೆ. ಉಡುಪಿ ನಗರದಲ್ಲೂ ಮಣಿಪಾಲ, ಇಂದ್ರಾಳಿ, ಸಗ್ರಿ, ಲಕ್ಷ್ಮಿಂದ್ರ ನಗರದ ಆಸುಪಾಸಿನಲ್ಲಿ ಹೆಚ್ಚಿನ ಪ್ರಕರಣ ವರದಿಯಾಗಿವೆ ಎಂದವರು ಹೇಳಿದರು.

ಡೆಂಗಿ ಪ್ರಕರಣ ವರದಿಯಾಗುತಿದ್ದಂತೆ ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ತ್ಯಾಜ್ಯಗಳು ಸಂಗ್ರಹವಾದ ಎಲ್ಲಾ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡಲಾಯಿತು. ಇದರಿಂದ ಎಲ್ಲೂ ನೀರು ನಿಲ್ಲದೇ ಲಾರ್ವಾ ಹಾಗೂ ಸೊಳ್ಳೆಗಳ ಉತ್ಪಾದನೆಗೆ ಅವಕಾಶವಿಲ್ಲದಂತಾಯಿತು ಎಂದು ಜಿಲ್ಲೆಯ ಮಲೇರಿಯಾಧಿಕಾರಿ ಡಾ.ವಾಸುದೇವ ಉಪಾಧ್ಯ ತಿಳಿಸಿದರು.

ಆಶಾ ಕಾರ್ಯಕರ್ತೆಯರು ಹಾಗ ಆರೋಗ್ಯ ಸಹಾಯಕಿರ ಮೂಲಕ ಮನೆಮನೆಗೆ ತೆರಳಿ ಜ್ವರ ಬಂದವರ ಸರ್ವೆ ನಡೆಸಿ, ಅವರ ಚಿಕಿತ್ಸೆಗೆ ಆದ್ಯತೆ ನೀಡಲಾಯಿತು. ಇದರೊಂದಿಗೆ ಲಾರ್ವಾ ಉತ್ಪತ್ತಿ ತಾಣಗಳನ್ನು ಗುರುತಿಸಿ ಅವುಗಳ ನಿವಾರಣೆ ಮಾಡಲಾಯಿತು. ಅಗತ್ಯಬಿದ್ದಲ್ಲಿ ಫಾಗಿಂಗ್ ನಡೆಸಿ ಸೊಳ್ಳೆ ನಿರ್ಮೂಲನೆಗೆ ಚಾಲನೆ ನೀಡಿದೆವು ಎಂದು ಅವರು ವಿವರಿಸಿದರು.

ಇಂಥ ತ್ವರಿತ ಗತಿಯ ಕ್ರಮಗಳಿಂದ ಇದೀಗ ಡೆಂಗಿ ಉಡುಪಿಯಲ್ಲಿ ನಿಯಂತ್ರಣಕ್ಕೆ ಬಂದಿದೆ. ಕಳೆದ ಎರಡು ಮೂರು ದಿನಗಳಿಂದ ಕೈಬೆರಳೆಣಿಕೆಯ ಕೇಸುಗಳು ವರದಿಯಾಗುತ್ತಿವೆ. ಆಗಾಗ ಸುರಿಯುವ ಮಳೆಯಿಂದ ರಿಸ್ಕ್ ಜಾಸ್ತಿ ಇದ್ದರೂ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿರುವುದರಿಂದ ಭಯ ಇಲ್ಲವಾಗಿದೆ ಎಂದರು.

ಇಲಿಜ್ವರ ನಿಯಂತ್ರಣದಲ್ಲಿ

ಈ ಬಾರಿ ಇಲಿಜ್ವರ, ಮಲೇರಿಯಾ ಸೇರಿದಂತೆ ಉಳಿದೆಲ್ಲಾ ಸಾಂಕ್ರಾಮಿಕ ರೋಗಗಳು ಸಂಪೂರ್ಣ ನಿಯಂತ್ರಣ ದಲ್ಲಿವೆ ಎಂದು ಡಿಎಚ್‌ಒ ಡಾ.ಬಸವರಾಜ ಹುಬ್ಬಳ್ಳಿ ತಿಳಿಸಿದರು. ಕಳೆದ ವರ್ಷ ಜಿಲ್ಲೆಯಲ್ಲಿ 342 ಪ್ರಕರಣಗಳು ವರದಿಯಾಗಿದ್ದರೆ, ಈ ಬಾರಿ ಮೊದಲ ಆರು ತಿಂಗಳಲ್ಲಿ ಕಂಡುಬಂದಿರುವುದು 35 ಪ್ರಕರಣಗಳು ಮಾತ್ರ.

2025ರಲ್ಲಿ ಉಡುಪಿಯಿಂದ 144, ಕುಂದಾಪುರದಿಂದ 95 ಹಾಗೂ ಕಾರ್ಕಳದಿಂದ 103 ಪ್ರಕರಣಗಳು ವರದಿಯಾ ಗಿದ್ದವು. ಈ ಬಾರಿ ಇದುವರೆಗೆ ಉಡುಪಿಯಿಂದ 14, ಕುಂದಾಪುರದಿಂದ 10 ಹಾಗೂ ಕಾರ್ಕಳದಿಂದ 11 ಪ್ರಕರಣಗಳು ವರದಿಯಾಗಿವೆ ಎಂದರು.

ಇನ್ನು ಎಚ್‌1ಎನ್‌1ನಲ್ಲಿ 1306 ಮಂದಿಯನ್ನು ಪರೀಕ್ಷೆಗೊಳಪಡಿ ಸಲಾಗಿದ್ದು, 17 ಮಂದಿಯಲ್ಲಿ ರೋಗ ಪತ್ತೆಯಾಗಿತ್ತು. ಈ ಬಾರಿ ಇದುವರೆಗೆ 501 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, 80 ಮಂದಿಯಲ್ಲಿ ಪಾಸಿಟಿವ್ ಆಗಿದೆ ಎಂದು ಅವರು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X