ಉಡುಪಿ: ಬೈಕಿನಿಂದ ಬಿದ್ದು ಸಹಸವಾರೆ ಮೃತ್ಯು

ಉಡುಪಿ, ಜ.31: ಬೈಕಿನಿಂದ ಬಿದ್ದು ಹಿಂಬದಿ ಸವಾರೆಯೊಬ್ಬರು ಮೃತಪಟ್ಟ ಘಟನೆ ಜ.30ರಂದು ಸಂಜೆ ವೇಳೆ ಕಿನ್ನಿಮುಲ್ಕಿ ಜಾಯಿ ವೀಲ್ ಅಲೈನ್‌ಮೆಂಟ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಬಾಗೀರಥಿ(53) ಎಂದು ಗುರುತಿಸಲಾಗಿದೆ. ರಜತ್ ಆಚಾರ್ಯ ಎಂಬವರು ತನ್ನ ಬೈಕಿನಲ್ಲಿ ತಾಯಿ ಬಾಗೀರಥಿ ಅವರನ್ನು ಕುಳ್ಳಿರಿಸಿಕೊಂಡು ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದು, ಈ ವೇಳೆ ಬೈಕ್ ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ಬಿತ್ತೆನ್ನಲಾಗಿದೆ.
ಇದರಿಂದ ಬೈಕ್ ಸವಾರ ಮತ್ತು ಸಹ ಸವಾರೆ ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡರು. ಇದರಿಂದ ಗಂಭೀರ ವಾಗಿ ಗಾಯಗೊಂಡ ಭಾಗೀರಥಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





