ಉಡುಪಿ| ಗ್ಯಾಸ್ ಬಿಲ್ ಬಾಕಿ ಹೆಸರಿನಲ್ಲಿ 9.78 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಉಡುಪಿ: ಗ್ಯಾಸ್ ಬಿಲ್ ಬಾಕಿ ಎಂದು ಹೇಳಿ ಸಂದೇಶ ಕಳುಹಿಸಿ ಲಕ್ಷಾಂತರ ರೂ. ಹಣ ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಿಯಾಳಿಯ ರವಿದಾಸ್ ರಾಘವೇಂದ್ರ ನಾಯಕ್ ಎಂಬವರಿಗೆ ಮಾ.17ರಂದು ಮೊಬೈಲ್‌ನಿಂದ ಅಪರಿಚತ ವ್ಯಕ್ತಿ ಕರೆ ಮಾಡಿ ನಿಮ್ಮ ಗ್ಯಾಸ್ ಬಿಲ್ 20ರೂ. ಬಾಕಿಯಾಗಿದೆ ಎಂದು ಹೇಳಿ ಗ್ಯಾಸ್ ಬಿಲ್ ಕಟ್ಟುವಂತೆ ತಿಳಿಸಿದರು. ಬಳಿಕ ವಾಟ್ಸಾಪ್‌ನಲ್ಲಿ ಗ್ಯಾಸ್ ಬಿಲ್ ಬಾಕಿ ಬಗ್ಗೆ ಮೆಸೇಜ್ ಮಾಡಿದ್ದು, ಎಪಿಕೆ ಪೈಲ್ ಕಳುಹಿಸಿದ್ದರು. ಇದನ್ನು ರವಿದಾಸ್ ಕ್ಲಿಕ್ ಮಾಡಿದಾಗ ಅವರ ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು 9,78,036ರೂ. ಹಣವವನ್ನು ಬೇರೆ ಖಾತೆಗೆ ವರ್ಗಾಯಿಸಿ ಮೋಸ ಮಾಡಲಾಗಿದೆ ಎಂದು ದೂರಲಾಗಿದೆ.
Next Story




