ಉಡುಪಿ | ಸಾಹೇಬಾನ್ ಸಮುದಾಯ ವೇದಿಕೆಯಿಂದ ಮಹಿಳೆಯರಿಗಾಗಿ ‘ಮಯ್ಯತ್ ಕಾ ಗುಸ್ಲ್’ ಕಾರ್ಯಾಗಾರ

ಉಡುಪಿ: ಸಾಹೇಬಾನ್ ಸಮುದಾಯ ವೇದಿಕೆಯ ವತಿಯಿಂದ ಉಡುಪಿಯ ನಾಯರ್ಕೆರೆಯ ಹಶಿಮಿ ಮಸೀದಿಯಲ್ಲಿ ಮಹಿಳೆಯರಿಗಾಗಿ ‘ಮಯ್ಯತ್ ಕಾ ಗುಸ್ಲ್ ಫಾರ್ ಲೇಡೀಸ್’ ಧಾರ್ಮಿಕ ಕಾರ್ಯಾಗಾರವನ್ನು ರವಿವಾರ ಆಯೋಜಿಸಲಾಗಿತ್ತು.
ಡಾ. ರುಖ್ಸರ್ ಅಂಜುಮ್ ಅವರು ನಡೆಸಿದ ಕಾರ್ಯಗಾರದಲ್ಲಿ 125 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದರು. ಮಯ್ಯತ್ ಪರಿಪಾಲನೆಗೆ ಸಂಬಂಧಿಸಿದ ಇಸ್ಲಾಮಿಕ್ ವಿಧಿ–ವಿಧಾನಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸುವ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಸಮುದಾಯದ ಮಹಿಳೆಯರಲ್ಲಿ ಅರಿವು ಮಾಡಿಸಿತು.
ಕಾರ್ಯಕ್ರಮದಲ್ಲಿ ಮೆಹ್ನಾಜ್ ಸ್ವಾಗತಿಸಿ, ರುಬಿನಾ ಅಶ್ರಫ್ ವಂದಿಸಿದರು ರಮೀಝಾ ಇಕ್ಬಾಲ್ ಮನ್ನಾ ಅವರು ಸಂಯೋಜಿಸಿದರು.
Next Story





