ಉಡುಪಿ | ಎಸ್‌ಐಒ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಶೇಖ್ ಆಯಾನ್ ಅಯ್ಯುಬ್ ಆಯ್ಕೆ

ಉಡುಪಿ, ಡಿ.22: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ, ಉಡುಪಿ ಜಿಲ್ಲೆಯ ಇದರ 2026ನೇ ಅವಧಿಗೆ ಅಧ್ಯಕ್ಷರಾಗಿ ಶೇಖ್ ಆಯಾನ್ ಅಯ್ಯುಬ್ ಆಯ್ಕೆಯಾಗಿದ್ದಾರೆ.
ಎಸ್ಐಒ ಕರ್ನಾಟಕ ರಾಜ್ಯ ಕಾರ್ಯದರ್ಶಿ ಆಸೀಫ್ ಡಿ.ಕೆ. ಅವರ ನೇತೃತ್ವದಲ್ಲಿ ನಡೆದ ಆಂತರಿಕ ಸಾಂಸ್ಥಿಕ ಪ್ರಕ್ರಿಯೆಯ ಮೂಲಕ ಈ ಚುನಾವಣೆ ನಡೆಸಲಾಯಿತು.
ಆಯಾನ್ ಅಯ್ಯುಬ್ ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲದಲ್ಲಿ ಅಂತಿಮ ವರ್ಷದ ಕಾನೂನು ಪದವಿಯನ್ನು ಪಡೆಯುತ್ತಿದ್ದು, ಈ ಹಿಂದೆ ಎಸ್ಐಒ ಮಲ್ಪೆಯ ಸ್ಥಾನೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಉಡುಪಿ ಜಿಲ್ಲೆಯಾದ್ಯಂತ ಹಲವು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
Next Story





