ಉಡುಪಿ: ಕೃಷ್ಣಾಪುರ ಮಠದಲ್ಲಿ ಊಟಕ್ಕೆ ಕುಳಿತುಕೊಳ್ಳುವ ವಿಚಾರದಲ್ಲಿ ಹಲ್ಲೆ: ದೂರು

ಉಡುಪಿ, ಸೆ.19: ಉಡುಪಿಯ ಕೃಷ್ಣಾಪುರ ಮಠದಲ್ಲಿ ಊಟದ ಸಾಲಿನಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಸೆ.18ರಂದು ರಾತ್ರಿ ಚಂದ್ರಕಾಂತ್ ಜೋಶಿ ಎಂಬಾತ ಊಟದ ಸಾಲಿನಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಧ್ರುವ ಎಂಬವರಿಗೆ ಅನಾವಶ್ಯಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲದೆ ಮರದ ಕೋಲಿನಿಂದ ಹೊಡೆದಿದ್ದಾರೆ ಎಂದು ದೂರಲಾಗಿದೆ.
ಇದೇ ವಿಚಾರದಲ್ಲಿ ಸೆ.19ರಂದು ಬೆಳಗ್ಗೆ ಕೃಷ್ಣ ಮಠದ ಆವರಣದಲ್ಲಿರುವ ಶ್ರೀರಾಘವೇಂದ್ರ ಮಠದ ಎದುರು ಹೋಗುತ್ತಿದ್ದ ಧ್ರುವ ರನ್ನು ಅಡ್ಡಗಟ್ಟಿದ ಚಂದ್ರಕಾಂತ್ ಜೋಶಿ, ಮರದ ರೀಪಿನಿಂದ ಹೊಡೆದು ಗಾಯ ಉಂಟು ಮಾಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ದದಿಂದ ಬೈದು ಕೋಲಿನಿಂದ ಹೊಡೆದು ಗಾಯ ಮಾಡಿದ್ದು ಜೀವಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





