ಉಡುಪಿ | ಸುಬ್ರಹ್ಮಣ್ಯನಗರ ಶಾಲೆಯ ಶೌಚಾಲಯ ಕಟ್ಟಡ ಉದ್ಘಾಟನೆ

ಉಡುಪಿ, ನ.16: ಅಸೋಸಿಯೇಷನ್ ಆಫ್ ಕನ್ಸಲ್ಟಿಟಗ್ ಸಿವಿಲ್ ಇಂಜಿನಿಯರ್ಸ್ ಎಂಡ್ ಆರ್ಕಿಟೆಕ್ಟ್(ಎಸಿಸಿಇಎ) ಉಡುಪಿ ಪ್ರಾಯೋಜಕತ್ವದಲ್ಲಿ ಸುಬ್ರಹ್ಮಣ್ಯನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಸುಮಾರು 2.50 ಲಕ್ಷ ರೂ. ವೆಚ್ಚದ ನೂತನ ಶೌಚಾಲಯ ಕಟ್ಟಡವನ್ನು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಉಮಾ ಉದ್ಘಾಟಿಸಿದರು.
ಎಸಿಸಿಇಎಯ ಅಧ್ಯಕ್ಷ ಯೋಗಿಶ್ಚಂದ್ರ ಧಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ನಗರಸಭಾ ಸದಸ್ಯೆ ಜಯಂತಿ ಪೂಜಾರಿ, ಏಸಿಸಿಇಎಯ ಮಾಜಿ ಅಧ್ಯಕ್ಷ ಪಾಂಡುರಂಗ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಸುಜಾತ ಬಿ. ಸ್ವಾಗತಿಸಿದರು.
ಸಂಸ್ಥೆಯ ಗೌರವಧ್ಯಕ್ಷ ನಾಗೇಶ್ ಹೆಗ್ಡೆ, ಮಾಜಿ ಅಧ್ಯಕ್ಷ ಗೋಪಾಲ್ ಭಟ್ ಹಾಗೂ ಎಸಿಸಿಇಎಯ ಸದಸ್ಯರುಗಳು, ಶಾಲೆಯ ಹಳೆ ವಿದ್ಯಾರ್ಥಿ ಪುರಂದರ ಶೆಟ್ಟಿ, ಶಾಲೆಯ ಶಿಕ್ಷಕಿಯರು, ಪೋಷಕರುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಮಹೇಶ್ ಕಾಮತ್ ವಂದಿಸಿದರು. ನಿರಂಜನ್ ಭಟ್ ಕಾರ್ಯಕ್ರಮ ನಿರೂಪಿಸಿದರು.
Next Story





