ಉಡುಪಿ | ಟೆಕ್ಝೋನ್ ನ್ಯಾಷನಲ್ಸ್ 2025: ಬಂಟಕಲ್ ವಿದ್ಯಾರ್ಥಿಗಳ ತಂಡ ಪ್ರಥಮ

ಉಡುಪಿ, ನ.17: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಕೌಶಿಕ್ ಎ., ಕಾರ್ತಿಕ್ ಸೂರ್ಯ ನಾರಾಯಣ ಅಮೀನ್, ಕೆ.ಎಸ್.ರವೀಶ್ ಪದ್ಮಶಾಲಿ ತಂಡವು ಶಿವಮೊಗ್ಗದ ಜೆಎನ್ಎನ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಇತ್ತೀಚೆಗೆ ನಡೆದ ಟೆಕ್ಝೋನ್ಸ್ ನ್ಯಾಷನಲ್ಸ್ 2025ರ ಲೈನ್ ಫಾಲೋವರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡಿದೆ.
ಈ ಸ್ಪರ್ಧೆಯಲ್ಲಿ ದೇಶಾದ್ಯಂತ ಒಟ್ಟು 50ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಎಸ್ಎಮ್ ಐಟಿಎಮ್ ನ ವಿದ್ಯಾರ್ಥಿಗಳ ತಂಡವು ರೋಬೋಟ್ ಅನ್ನು ಲೈನ್ ಫಾಲೋಯಿಂಗ್ ಟ್ರ್ಯಾಕ್ ನಲ್ಲಿ ಚಲಾಯಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿ ಬಹುಮಾನವನ್ನು ಪಡೆದಿದ್ದಾರೆ.
Next Story





