ಉಡುಪಿ | ಸಂವಿಧಾನವನ್ನು ಆರಾಧಿಸುವುದಲ್ಲ, ಆಚರಿಸಬೇಕು: ಡಾ.ಜಯಪ್ರಕಾಶ್ ಶೆಟ್ಟಿ

ಉಡುಪಿ, ನ.26: ಸಮಾನತೆ, ಸಹಭಾಗಿತ್ವಕ್ಕೆ ಅಗತ್ಯವಾದ ಸಾಮರಸ್ಯದ ವಾತಾವರಣದಲ್ಲಿ ವೈಚಾರಿಕ ಮನೋಧರ್ಮದೊಂದಿಗೆ ದೇಶದ ನೈಸರ್ಗಿಕ ಮತ್ತು ಸಾರ್ವಜನಿಕ ಸಂಪತ್ತನ್ನು ಕಾದುಕೊಂಡು ಹೋಗುವ ಮೂಲಕ ಸಂವಿಧಾನವನ್ನು ನಮ್ಮ ನಿತ್ಯದ ಆಚರಣೆಯಾಗಿ ನಿಜವಾಗಿಸಬೇಕಲ್ಲದೆ ಅದರ ಪ್ರತಿಕೃತಿಯನ್ನು ಆರಾಧಿಸುವ ತೋರಿಕೆಯನ್ನು ನಡೆಸುವುದಲ್ಲ ಎಂದು ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಹೇಳಿದ್ದಾರೆ.
ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಪರ್ಣ ಕೆ.ಯು. ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ನಂದೀಶ್ ಕುಮಾರ್ ಕೆ.ಸಿ. ಸಂವಿಧಾನ ಪೀಠಿಕೆ ಬೋಧಿಸಿದರು.
ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಧ್ಯಕ್ಷ ಈರ ಬಸು, ಉಪಾಧ್ಯಕ್ಷೆ ವೈಷ್ಣವಿ ಉಪಸ್ಥಿತರಿದ್ದರು. ಅಭೀಷ ಸ್ವಾಗತಿಸಿ, ಅಕ್ಷಯ ವಂದಿಸಿದರು. ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.





