ಉಡುಪಿ | ಅಪಾಯದ ಸ್ಥಿತಿಯಲ್ಲಿದ್ದ ಟ್ರಾನ್ಸ್‌ಫಾರ್ಮರ್ ಕೊನೆಗೂ ದುರಸ್ತಿ

ಉಡುಪಿ, ನ.14: ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದ್ದ, ನಗರಸಭೆಯ 25ನೇ ಕುಂಜಿಬೆಟ್ಟು ವಾರ್ಡಿನಲ್ಲಿ ಬರುವ ಗೋವಿಂದ ಪುಷ್ಕರಣಿ 1 ನೇ ಅಡ್ಡರಸ್ತೆ ಬಳಿಯಿದ್ದ ಟ್ರಾನ್ಸ್‌ಫಾರ್ಮರ್ ಕಂಬವನ್ನು ಆಯಕಟ್ಟಿನ ಸ್ಥಳದಲ್ಲಿ ಅಳವಡಿಸಲಾಗಿದೆ.
ಮಳೆ ನೀರು ಹರಿಯುವ ಕಾಲುವೆಯಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಿರುವ ಒಂದು ಕಂಬವಿತ್ತು, ಮತ್ತೊಂದು ಕಂಬವು ಕಾಲುವೆ ದಂಡೆಯ ಮೇಲಿತ್ತು. ಟ್ರಾನ್ಸ್‌ಫಾರ್ಮರ್ ಬೀಳುವ ಮೂನ್ಸೂಚನೆ ತಿಳಿದು ಕಂಬಕ್ಕೆ ಎರಡು ಹಗ್ಗಗಳನ್ನು ಕಟ್ಟಿ ಖಾಸಗಿಯವರ ತೆಂಗಿನ ಮರಕ್ಕೆ ಕಟ್ಟಿಡಲಾಗಿತ್ತು.
ಸಮಸ್ಯೆಯನ್ನು ಗಮನಿಸಿದ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಕಂಬಗಳ ದುರಸ್ತಿಗೆ ಆಗ್ರಹಿಸಿದ್ದರು. ಇದಕ್ಕೆ ಸ್ಪಂದಿಸಿದ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗಣರಾಜ್ ಭಟ್, ಕಿರಿಯ ಅಭಿಯಂತರ ಅಶೋಕ್ ಶೆಟ್ಟಿ ಮುತುವರ್ಜಿಯಲ್ಲಿ ಟ್ರಾನ್ಸ್‌ಫಾರ್ಮರ್ ನ ದುರಸ್ಥಿ ಪಡೆದುಕೊಂಡಿತು.
ನ.28ರಂದು ಉಡುಪಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿಯವರ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸನಿಹದ ಗದ್ದೆ ಬಯಲಿನಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಾರೆಂದು ಹೇಳಲಾಗುತಿತ್ತು. ಇದೇ ಸ್ಥಳದಲ್ಲಿಯೇ ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿರುವ ಟ್ರಾನ್ಸ್‌ಫಾರ್ಮರ್ ಕಂಬ ಇತ್ತು.







