Udupi | ಯಕ್ಷಗಾನದಲ್ಲಿ ತಮಿಳು ಹಾಡು ಬಳಕೆ: ಕರವೇ ವಿರೋಧ

ಸಾಂದರ್ಭಿಕ ಚಿತ್ರ
ಉಡುಪಿ : ಶ್ರೀಕ್ಷೇತ್ರ ಕುಕ್ಕೆಹಳ್ಳಿ ಯಕ್ಷಗಾನ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ತಮಿಳು ಹಾಡಿನ ಬಳಕೆ ಮಾಡಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ವಿರೋಧ ವ್ಯಕ್ತಪಡಿಸಿದೆ.
ಮೇಳದವರು ವೈಭವ ಸೂರ್ಯವಂಶಿ ಹೆಸರಿನ ಪ್ರಸಂಗವನ್ನು ನಡೆಸುತ್ತಿದ್ದು, ಈ ಪ್ರಸಂಗದಲ್ಲಿ ತಮಿಳು ಹಾಡಿನ ಬಳಕೆಯಾಗಿರುವುದು ಗಮನಕ್ಕೆ ಬಂದಿದೆ. ಇದು ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಎಸಗಿರುವ ಅವಮಾನವಾಗಿದೆ. ಇದನ್ನು ಸಂಘಟನೆಯು ಬಲವಾಗಿ ಖಂಡಿಸುತ್ತದೆ ಎಂದು ಕರವೇ ಜಿಲ್ಲಾ ಗೌರವಾಧ್ಯಕ್ಷ ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.
ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆಯಲಿರುವ ಈ ಯಕ್ಷಗಾನ ಪ್ರಸಂಗಕ್ಕೆ ಅನುಮತಿ ನೀಡಬಾರದೆಂದು ಕರವೇ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದೆ. ಶ್ರೀಕ್ಷೇತ್ರ ಕುಕ್ಕೆಹಳ್ಳಿ ಮೇಳದವರ ಕನ್ನಡ ವಿರೋಧಿ ವರ್ತನೆ ಇದೇ ರೀತಿ ಮುಂದುವರಿಸಿದರೆ ಪ್ರಸಂಗ ನಡೆಯುವ ಜಾಗಕ್ಕೆ ಬಂದು ಪ್ರಸಂಗವನ್ನು ನಿಲ್ಲಿಸುವ ಕೆಲಸ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Next Story




