ಉಡುಪಿ: ನ.18ರಂದು ಎ.ಎಸ್.ಪುತ್ತಿಗೆಯವರ ‘ಫೆಲೆಸ್ತೀನ್ ನಲ್ಲಿ ನಡೆಯುತ್ತಿರುವುದೇನು?’ ಪುಸ್ತಕ ಬಿಡುಗಡೆ

ಉಡುಪಿ: ಸಹಬಾಳ್ವೆ ವತಿಯಿಂದ ಎ.ಎಸ್. ಪುತ್ತಿಗೆಯವರ ‘ಫೆಲೆಸ್ತೀನ್ ನಲ್ಲಿ ನಡೆಯುತ್ತಿರುವುದೇನು?’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನ.18ರಂದು (ಶನಿವಾರ) ಸಂಜೆ 6.15ಕ್ಕೆ ಉಡುಪಿ ಡಾನ್ ಬಾಸ್ಕೋ ಹಾಲ್ ನಲ್ಲಿ ನಡೆಯಲಿದೆ.
ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಪುಸ್ತಕ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಯಾಗಿ ಚಿಂತಕ ಮತ್ತು ಲೇಖಕ ಶಿವಸುಂದರ್ ಭಾಗವಹಿಸಲಿದ್ದಾರೆ. ವಿಮರ್ಶಕ ಮುಷ್ತಾಕ್ ಹೆನ್ನಾಬೈಲು ಪುಸ್ತಕ ಪರಿಚಯ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಸಹಬಾಳ್ವೆ ಸಂಚಾಲಕ ಪ್ರೊ.ಕೆ.ಫಣಿರಾಜ್ ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story





