ಉಡುಪಿ : ಮಹಿಳಾ ಸಬಲೀಕರಣ ಕೋಶ ಉದ್ಘಾಟನೆ

ಉಡುಪಿ, ಮೇ 9: ಮಹಿಳಾ ಆರೋಗ್ಯ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿ ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು ವತಿಯಿಂದ ಆರಂಭಿಸಲಾದ ಮಹಿಳಾ ಸಬಲೀಕರಣ ಕೋಶವನ್ನು ಕಾಲೇಜಿನ ಟಿ ಮೋಹನದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್‌ನಲ್ಲಿ ಇತ್ತೀಚೆಗೆ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಸಹಾಯಕ ಪ್ರಾಧ್ಯಾಪಕಿ, ಇನ್-ಚಾರ್ಜ್ ಡಯಟೀಷಿಯನ್ ಸುವರ್ಣ ಹೆಬ್ಬಾರ್ ಉದ್ಘಾಟಿಸಿದರು. ಬಳಿಕ ಅವರು ಪ್ರತಿಯೊಬ್ಬ ಮಹಿಳೆಗೆ ಪೋಷಣೆ ಎಂಬ ವಿಶೇಷ ಅಧಿವೇಶನವನ್ನು ನಡೆಸಿಕೊಟ್ಟರು.
ಸಮತೋಲಿತ ಆಹಾರ, ಕಬ್ಬಿಣಾಂಶಭರಿತ ಆಹಾರಗಳು ಮತ್ತು ಮಹಿಳೆಯರಿಗೆ ಆರೋಗ್ಯಕರ ಜೀವನಶೈಲಿಯ ಅಭ್ಯಾಸಗಳ ಮಹತ್ವವನ್ನು, ರಕ್ತಹೀನತೆ ಮತ್ತು ಒತ್ತಡದಂತಹ ಸಾಮಾನ್ಯ ಆರೋಗ್ಯ ಕಾಳಜಿಗಳ ಕುರಿತು ಅವರು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯಕ್ ಮಹಿಳಾ ಆರೋಗ್ಯ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮದ ಕುರಿತು ಮಹಿಳಾ ಸಬಲೀಕರಣ ಕೋಶದ ಯೋಜನೆಗಳ ಬಗ್ಗೆ ಮಾತನಾಡಿದರು. ಮಹಿಳಾ ಸಬಲೀಕರಣ ಕೋಶದ ಸಂಚಾಲಕ ದೀಕ್ಷಾ ಎಸ್. ಹಾಗೂ ವರ್ಷಿಣಿ ಕೋಟ್ಯಾನ್ ಉಪಸ್ಥಿತರಿದ್ದರು. ಮಿತಾಲಿ ಕಾರ್ಯಕ್ರಮ ನಿರೂಪಿಸಿದರು.






