ಉದ್ಯಾವರ | ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ

ಉಡುಪಿ : ಉಡುಪಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕೌಮಾರಭೃತ್ಯ ವಿಭಾಗದ ವತಿಯಿಂದ ಮಕ್ಕಳದಿನಾಚರಣೆಯ ಪ್ರಯುಕ್ತ ಉದ್ಯಾವರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮವನ್ನು ನ.12ರಂದು ಹಮ್ಮಿಕೊಳ್ಳಲಾಗಿತ್ತು.
ದ್ರವ್ಯಗುಣ ವಿಭಾಗದ ಮುಖ್ಯಸ್ಥ, ಸ್ನಾತಕೋತ್ತರ ವಿಭಾಗದ ಅಧ್ಯಕ್ಷ ಡಾ.ಶ್ರೀಕಾಂತ್ ಪಿ. ಮಾತನಾಡಿ, ಆಯುರ್ವೇದವು ಜೀವನಶೈಲಿಯನ್ನು ಬಿಂಬಿಸುವ ವಿಜ್ಞಾನ, ಅದರ ಮೂಲವೇ ಸಸ್ಯಗಳ ಜ್ಞಾನ. ಇಂದು ಅದರ ವಿಸ್ತೃತ ವಿವರಣೆಯನ್ನು ತಿಳಿಯಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆವಿ ವಹಿಸಿದ್ದರು. ಸಂಸ್ಥೆಯ ಶೈಕ್ಷಣಿಕ ಉಪಪ್ರಾಂಶುಪಾಲ ಡಾ.ನಾಗರಾಜ್ ಎಸ್.ಉದ್ಯಾವರ ಸರಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ತಾರಾ, ವಿಭಾಗದ ಸಹ ಪ್ರಾಧ್ಯಾಪಕಿ ಡಾ.ನಾಗರತ್ನ ಜೆ., ಸಹಾಯಕ ಪ್ರಾಧ್ಯಾಪಕಿಯರಾದ ಡಾ.ಕಾವ್ಯ ಹಾಗೂ ಡಾ.ಚಿತ್ರಲೇಖಾ ಉಪಸ್ಥಿತರಿದ್ದರು.
ವಿಭಾಗ ಮುಖ್ಯಸ್ಥ ಡಾ.ಪೃಥ್ವಿರಾಜ್ ಪುರಾಣಿಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲರೋಗ ವಿಭಾಗದ ದ್ವಿತೀಯ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ಪೂಜಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಮನ್ವಯಕಾರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಸಹನಾ ಶಂಕರಿ ವಂದಿಸಿದರು.
ನಂತರ ಡಾ.ಪೃಥ್ವಿರಾಜ್ ಪುರಾಣಿಕ್ ಹಾಗೂ ಡಾ.ಸಹನಾ ಶಂಕರಿ, ಹದಿಹರೆಯದ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು. ವಿಭಾಗದ ಮಕ್ಕಳತಜ್ಞರು ನೆರೆದ 56 ಮಂದಿ ವಿದ್ಯಾರ್ಥಿಗಳ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಿದರು.
ಸಂಸ್ಥೆಯ ಅಮೂಲ್ಯ ಗಿಡಮೂಲಿಕೆಗಳ ಮಾಹಿತಿ ಕಾರ್ಯಕ್ರಮವು ದ್ರವ್ಯಗುಣ ವಿಭಾಗದ ಅಧ್ಯಾಪಕರಾದ ಡಾ.ಫೈಝಲ್ ಹಾಗೂ ಡಾ.ಪೂರ್ಣಿಮಾ ನೇತೃತ್ವದಲ್ಲಿ ನಡೆಯಿತು. ಕಾಲೇಜಿನ ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ.ಕೃಷ್ಣಮೂರ್ತಿ ಎನ್. ಹಾಗೂ ಸಹ ಪ್ರಾಧ್ಯಾಪಕಿ ಡಾ.ಅಂಜು ಥೋಮಸ್ ಅತ್ಯಾಧುನಿಕ ತಂತ್ರಜ್ಞಾನದಿಂದೊಳ ಗೊಂಡ ಅನಾಟಮೇಜ್ ಮುಖಾಂತರ ದೇಹದ ಭಾಗಗಳನ್ನು ವಿವರಿಸಿ, ಅನಾಟಮಿ ಸಂಗ್ರಹಾಲಯದಲ್ಲಿ ಶರೀರದ ಅಂಗಾಂಗಗಳ ರಚನೆಯನ್ನು ಪ್ರತ್ಯಕ್ಷವಾಗಿ ತೋರಿಸಿದರು.






