ಬಾವಿಗೆ ಬಿದ್ದು ಅಪರಿಚಿತ ಮೃತ್ಯು

ಕೊಲ್ಲೂರು, ಆ.15: ಅಪರಿಚಿತ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಹಾಳು ಬಿದ್ದ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೊಲ್ಲೂರು ಗ್ರಾಮದ ಅನ್ನಪೂರ್ಣ ವಸತಿಗೃಹ ಬಳಿ ಆ.14ರಂದು ನಸುಕಿನ ವೇಳೆ ನಡೆದಿದೆ.
ಸುಮಾರು 45ರಿಂದ 50ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಒಬ್ಬಂಟಿಯಾಗಿ ಕೊಲ್ಲೂರಿಗೆ ಬಂದು ಕತ್ತಲಲ್ಲಿ ದಾರಿ ತಿಳಿಯದೆ ಹಾಳು ಬಿದ್ದ ಬಾವಿಗೆ ಆಕಸ್ಮಿಕವಾಗಿ ಬಿದ್ದರೆನ್ನಲಾಗಿದೆ. ಬಾವಿಯಲ್ಲಿರುವ ಗಿಡ ಬಳ್ಳಿಗಳನ್ನು ಕವಚಿಯಾಗಿ ಕೈಯಲ್ಲಿ ಹಿಡಿದು ಸಹಾಯಕ್ಕಾಗಿ ಬೊಬ್ಬೆ ಹಾಕುತ್ತಿದ್ದು ಕೂಡಲೇ ಸ್ಥಳೀಯರು ಹಗ್ಗ ಇಳಿಸಿ ಮೇಲಕ್ಕೆತ್ತಲು ಪ್ರಯತ್ನಿಸಿದರು. ಆದರೆ ಆ ವ್ಯಕ್ತಿಯ ಕೈಯಿಂದ ಹಗ್ಗ ತಪ್ಪಿಬಾವಿಯ ನೀರಿನಲ್ಲಿ ಮುಳುಗಿ ಮೃತಪಟ್ಟರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮೃತದೇಹವನ್ನು ಮೇಲಕ್ಕೆ ಎತ್ತಿದರು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





