Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಎಲ್ಲರನ್ನೂ ಒಳಗೊಳ್ಳುವ, ಸುಸ್ಥಿರ...

ಎಲ್ಲರನ್ನೂ ಒಳಗೊಳ್ಳುವ, ಸುಸ್ಥಿರ ಅಭಿವೃದ್ಧಿ ದೇಶದ ತುರ್ತು ಅಗತ್ಯತೆ: ಅರ್ಥಶಾಸ್ತ್ರಜ್ಞ ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅಭಿಮತ

ತಲ್ಲೂರು ನುಡಿಮಾಲೆಯಲ್ಲಿ ಉಪನ್ಯಾಸ

ವಾರ್ತಾಭಾರತಿವಾರ್ತಾಭಾರತಿ24 Sept 2023 8:46 PM IST
share
ಎಲ್ಲರನ್ನೂ ಒಳಗೊಳ್ಳುವ, ಸುಸ್ಥಿರ ಅಭಿವೃದ್ಧಿ ದೇಶದ ತುರ್ತು ಅಗತ್ಯತೆ: ಅರ್ಥಶಾಸ್ತ್ರಜ್ಞ ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅಭಿಮತ

ಉಡುಪಿ, ಸೆ.24: ದೇಶದ ಎಲ್ಲರನ್ನೂ ಒಳಗೊಳ್ಳುವ ಹಾಗೂ ಸುಸ್ಥಿರ ಅಭಿವೃದ್ಧಿ ಇಂದಿನ ತುರ್ತು ಅಗತ್ಯವಾಗಿದೆ. ಪ್ರಗತಿ ಎನ್ನುವುದು ದೇಶದ ಪ್ರತಿಯೊಬ್ಬನನ್ನೂ ಒಳಗೊಳ್ಳಬೇಕಾಗಿದ್ದು, ಪ್ರತಿಯೊಬ್ಬನಿಗೂ ಅದರ ಲಾಭ ದಕ್ಕುವಂತಿರಬೇಕು ಎಂದು ದೇಶದ ಹಿರಿಯ ಅರ್ಥಶಾಸ್ತ್ರಜ್ಞರೂ, ಭಾರತದ ಯೋಜನಾ ಆಯೋಗದ ಕೊನೆಯ ಉಪಾಧ್ಯಕ್ಷರೂ, ಭಾರತದಲ್ಲಿ ಆರ್ಥಿಕ ಉದಾರೀಕರಣದ ರೂವಾರಿಗಳಲ್ಲಿ ಒಬ್ಬರೂ ಆಗಿರುವ ಮೊಂಟೆಕ್‌ಸಿಂಗ್ ಅಹ್ಲೂವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.

ನಗರದ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ತಲ್ಲೂರಿನ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ಅದರ ಕರಾವಳಿ ಕಟ್ಟು ಆಶ್ರಯದಲ್ಲಿ ತಲ್ಲೂರು ನುಡಿಮಾಲೆ- 2023ರಲ್ಲಿ ‘ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿಗೆ ವಿಶೇಷ ಸವಾಲುಗಳು’ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತಿದ್ದರು.

ಭವಿಷ್ಯದಲ್ಲಿ ದೇಶದ ಪ್ರಗತಿಗೆ ಪೂರಕವಾದ ನೀತಿಯ ಸಂರಚನೆ, ಪ್ರಗತಿ ನೋಟ, ಅಭಿವೃದ್ಧಿಯ ನಿರೀಕ್ಷೆ, ತಂತ್ರಜ್ಞಾನದ ಮುನ್ನಡೆ ಹಾಗೂ ಹವಾಮಾನ ಬದಲಾವಣೆಯ ಕುರಿತಂತೆ ವಿಶೇಷ ಒತ್ತು ನೀಡಿ ಮಾತನಾಡಿದ ಅಹ್ಲೂವಾಲಿಯಾ, ಇದಕ್ಕೆ ನೀತಿ ನಿರೂಪಣೆ ಕುರಿತಂತೆ ಸಮಗ್ರವಾದ ದೃಷ್ಟಿಕೋನ ಬೇಕಾಗಿದೆಯೇ ಹೊರತು ಕ್ಷೇತ್ರೀಯ ದೃಷ್ಟಿಕೋನವಲ್ಲ ಎಂದರು.

ತಂತ್ರಜ್ಞಾನ ಎಂಬುದು ಯಾವತ್ತೂ ಪ್ರಯೋಜನಕಾರಿಯಾಗಿಯೇ ಇರಬೇಕಿಲ್ಲ. ಎಲ್ಲಾ ರೀತಿಯ ತಂತ್ರಜ್ಞಾನಗಳಿಗೂ ಮುಕ್ತವಾಗಿ ತೆರೆದುಕೊಂಡು ನಂತರ ಅವುಗಳನ್ನು ಸರಿಯಾಗಿ, ಬೇಕಾದಂತೆ ನಿರ್ವಹಿಸುವ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ದೇಶದ ಪ್ರಗತಿಯಲ್ಲಿ ಪ್ರಾದೇಶಿಕ ಹಾಗೂ ಆಯಾ ರಾಜ್ಯಗಳ ಪ್ರಾಮುಖ್ಯತೆಯನ್ನು ಕಡೆಗಣಿಸಬಾರದು. ಪ್ರಗತಿಯ ಮಾನದಂಡವು ಉದ್ಯೋಗಾಧಾರಿತವಾಗಿರಬೇಕು. ಲಿಂಗ ಸಮಾನತೆಯನ್ನು ಇನ್ನಷ್ಟು ಉತ್ತಮಗೊಳಿಸಲೇಬೇಕಾದ ಅನಿವಾರ್ಯತೆ ಇದೆ. ಅದೇ ರೀತಿ ರಾಜ್ಯಗಳ ನಡುವೆ ಪ್ರಗತಿ ದರದಲ್ಲಿರುವ ಅಸಮಾನತೆ ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು 82ರ ಹರೆಯದ ಅಹ್ಲೂವಾಲಿಯಾ ತಿಳಿಸಿದರು.

ಬೆಳವಣಿಗೆಯಲ್ಲಿ ಏರಿಳಿತ: ಸ್ವಾತಂತ್ರ್ಯಾ ನಂತರ ದೇಶ ಬೆಳವಣಿಗೆಯಲ್ಲಿ ಕಂಡ ಏರಿಳಿತವನ್ನು ದಾಖಲಿಸಿದ ಅಹ್ಲೂವಾಲಿಯಾ, ನೆಹರು ಯುಗದಲ್ಲಿ ನಿರೀಕ್ಷಿತ ಬೆಳವಣಿಗೆ ದರವಾದ ಶೇ.4.5ರ ಗುರಿಯನ್ನು ಮುಟ್ಟಲು ಸಾಧ್ಯವಾಗದಿದ್ದರೂ, ಅದು ಬ್ರಿಟಿಷರ ಕಾಲಕ್ಕಿಂತ ಉತ್ತಮವಿತ್ತು. 1960 ಮಧ್ಯಭಾಗ ಹಾಗೂ 1970ರಲ್ಲಿ ಬೆಳವಣಿಗೆ ದರ ನಿಧಾನಗತಿಯಲ್ಲಿತ್ತು. ಏಕೆಂದರೆ ಆಗ ಆರ್ಥಿಕ ನೀತಿಗಳ ಮೇಲೆ ಸರಕಾರದ ಹಿಡಿತವಿತ್ತು ಎಂದರು.

1980ರ ದಶಕದಲ್ಲಿ ಆರ್ಥಿಕ ಬೆಳವಣಿಗೆ ಶೇ.5.5ಕ್ಕೇರಿತ್ತು. 1990ರಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಆರ್ಥಿಕ ಸುಧಾರಣೆಗಳು ಅನಿವಾರ್ಯವೆನಿಸಿದವು.ದೇಶದ ಆರ್ಥಿಕತೆಯ ಸ್ಥಿರತೆಗಾಗಿ ರಚನಾತ್ಮಕ ಸುಧಾರಣೆಗಳನ್ನು ನಿಯಂತ್ರಿಸಲಾಯಿತು. ಸುಧಾರಣೆಗಳು ಫಲಪ್ರದವಾಗಲು ಕೆಲವರ್ಷ ಕಾಯಲೇ ಬೇಕಿತ್ತು. ಹೀಗಾಗಿಯೇ ಈಗಿನ ಸರಕಾರ ಜಾರಿಗೆ ತಂದ ಜಿಎಸ್‌ಟಿ ಪರಿಣಾಮ 6-7ವರ್ಷಗಳ ನಂತರ ಈಗ ಕಾಣುತ್ತಿದೆ. 1991ರಲ್ಲಿ ಜಾರಿಗೆ ತಂದ ಆರ್ಥಿಕ ಸುಧಾರಣೆಯ ಫಲ 2000ದ ಬಳಿಕ ಪ್ರಗತಿ ಏರುವಲ್ಲಿ ಗೋಚರಿಸಿದೆ ಎಂದು ದೇಶದಲ್ಲಿ ಉದಾರೀಕರಣ ಹಾಗೂ ಜಾಗತೀಕರಣದ ರೂವಾರಿಗಳಲ್ಲಿ ಒಬ್ಬರಾದ ಮೊಂಟೆಕ್‌ಸಿಂಗ್ ತಿಳಿಸಿದರು.

ತಮ್ಮ ಉಪನ್ಯಾಸದಲ್ಲಿ ಅಹ್ಲೂವಾಲಿಯಾ ಅವರು ಖಾಸಗೀಕರಮದ ಪರವಾಗಿ ಬ್ಯಾಟಿಂಗ್ ನಡೆಸಿದರು. ಖಾಸಗಿ ಬಂಡವಾಳವನ್ನು ಹೆಚ್ಚಿಸುವುದರಿಂದ ದೇಶದ ಆರ್ಥಿಕತೆ ಹೆಚ್ಚು ಸ್ಪರ್ಧಾತ್ಮಕವಾಗಿರುತ್ತದೆ ಎಂದ ಅವರು ಸದ್ಯ ಭಾರತದ ಪ್ರಗತಿ ದರ ಶೇ.6.5 ಆಗಿದ್ದು, ಶೀಘ್ರದಲ್ಲಿ ಭಾರತ, ಚೀನ ಮತ್ತು ಅಮೆರಿಕದ ಬಳಿಕ ವಿಶ್ವದ ಮೂರನೇ ಅತ್ಯಂತ ವೇಗದ ಆರ್ಥಿಕತೆ ದೇಶವಾಗಿ ಹೊರಹೊಮ್ಮಲಿದೆ ಎಂದರು.

ವಾಣಿಜ್ಯ ನೀತಿಯನ್ನು ಹೆಚ್ಚು ಮುಕ್ತಗೊಳಿಸಬೇಕಾದ ಅಗತ್ಯವಿದ್ದು, ನಮ್ಮ ತಂತ್ರಜ್ಞರು, ಐಟಿ ಇಂಜಿನಿಯರ್‌ಗಳು ಯಾಕೆ ಬೇರೆ ದೇಶಗಳಿಗೆ ವಲಸೆ ಹೋಗುತಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ. ವಾಣಿಜ್ಯ ವ್ಯವಹಾರದಲ್ಲಿ ಈಗ ಚೀನದ ಸಾರ್ವಭೌಮತ್ವವನ್ನು ಮುರಿದು ಭಾರತ ಮುನ್ನಡೆಯಬೇಕಿದೆ ಎಂದರು.

ಹವಾಮಾನ ಬದಲಾವಣೆ ಉಲ್ಬಣಗೊಳ್ಳುತ್ತಿದೆ. ಆದರೆ ಇದಕ್ಕೆ ಕಾರಣವಾದ ದೇಶಗಳು ಯಾವುದೇ ಪರಿಹಾರ ಕ್ರಮ ಗಳನ್ನು ಕೈಗೊಳ್ಳುತ್ತಿಲ್ಲ. 2070ರಲ್ಲಿ ನೆಟ್-ಝಿರೋ ಹೊರಸೂಸುವಿಕೆಯ ಗುರಿಯನ್ನು ಮುಟ್ಟುವಲ್ಲಿ ಭಾರತ ವಾಸ್ತವಿಕ ವಾದ ತಂತ್ರವನ್ನು ಅಳವಡಿಸಿಕೊಳ್ಳಬೇಕು ಹಾಗೂ ಉಳಿದ ದೇಶಗಳೂ ಇದನ್ನು ಸಾಧಿಸಲು ಪ್ರೇರಣೆ ಒದಗಿಸಬೇಕು. ಇದಕ್ಕಾಗಿ ಮಾಲಿನ್ಯಕಾರಕವಲ್ಲದ ಉದ್ದಿಮೆಯ ಮೇಲೆ ಬಂಡವಾಳ ಹೂಡಿಕೆಯನ್ನು ಹೆಚ್ಚೆಚ್ಚು ಮಾಡಬೇಕು ಎಂದರು.

ಅಹ್ಲೂವಾಲಿಯಾ ಅವರ ಉಪನ್ಯಾಸದ ಬಳಿಕ ನಾಡಿನ ಇನ್ನೊಬ್ಬ ಹಿರಿಯ ಅರ್ಥಶಾಸ್ತ್ರಜ್ಞರಾಗಿರುವ ಬೆಂಗಳೂರಿನ ಐಐಎಂಬಿಯ ಪ್ರೊ.ಎಂ.ಎಸ್. ಶ್ರೀರಾಮ್ ಅವರೊಂದಿಗೆ ಸಂವಾದ ನಡೆಸಿದರು.

‘ಎಂ ಡಾಕ್ಯುಮೆಂಟ್’ ಪುಸ್ತಕ ಬಿಡುಗಡೆ

ಇದೇ ಕಾರ್ಯಕ್ರಮದಲ್ಲಿ ಮೊಂಟೆಕ್‌ಸಿಂಗ್ ಅಹ್ಲೂವಾಲಿಯಾ ಅವರು ಬರೆದ ‘ಬ್ಯಾಕ್‌ಸ್ಟೇಜ್’ ಕೃತಿಯ ಕನ್ನಡ ಅನುವಾದ ‘ಎಂ ಡಾಕ್ಯುಮೆಂಟ್’ ಪುಸ್ತಕವನ್ನು ಸ್ವತಹ ಅಹ್ಲೂವಾಲಿಯಾ ಅವರು ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು. ಕೃತಿಯನ್ನು ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿಗಳಲ್ಲೊಬ್ಬರಾದ, ಲೇಖಕ, ಪತ್ರಕರ್ತ ರಾಜಾರಾಮ ತಲ್ಲೂರು ಕನ್ನಡಕ್ಕೆ ಅನುವಾದಿ ಸಿದ್ದು, ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಇದನ್ನು ಪ್ರಕಟಿಸಿದೆ.

ಪ್ರೊ.ಎಂ.ಎಸ್.ಶ್ರೀರಾಮ್ ಅವರು ಪುಸ್ತಕವನ್ನು ಪರಿಚಯಿಸಿದರು. ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಸುರೇಶ್ ತಲ್ಲೂರು ಉಪಸ್ಥಿತರಿದ್ದರು.

ಕರಾವಳಿ ಕಟ್ಟು ತಂಡದ ಸದಸ್ಯರಲ್ಲೊಬ್ಬರಾದ ಎಂಐಟಿಯ ಪ್ರಾಧ್ಯಾಪಕ ಡಾ.ದಶರಥರಾಜ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಬಳ್ಳಾರಿಯ ಪ್ರಾಧ್ಯಾಪಕ ಪ್ರೊ.ರಾಬರ್ಟ್ ಜೋಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನುವಾದಕ ರಾಜಾರಾಮ್ ತಲ್ಲೂರು ಅನುಭವ ಹಂಚಿಕೊಂಡರು.

ಸುಮಾ ಜೋಶ್ ಹಾಗೂ ಐಶ್ವರ್ಯ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರೆ, ಡಾ.ಪಿ.ವಿ.ಭಂಡಾರಿ ವಂದಿಸಿದರು.



share
ವಾರ್ತಾಭಾರತಿ
ವಾರ್ತಾಭಾರತಿ
Next Story
X