ಕೋಟೇಶ್ವರ | ಯುವಿಎ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್–2: ಟೀಮ್ ನೈಲ್ ಚಾಂಪಿಯನ್

ಕುಂದಾಪುರ, ಮಾ.30: ಕೋಟೇಶ್ವರದ ಕ್ಲಬ್ ಮೆರಿಡಿಯನ್ ನಲ್ಲಿ ನಡೆದ 'ಯುವಿಎ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್–2'ರಲ್ಲಿ ಟೀಮ್ ನೈಲ್ ಚಾಂಪಿಯನ್ ಪಟ್ಟವನ್ನು ಗೆದ್ದು ರೂ.2.5 ಲಕ್ಷ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಡಾಲ್ಫಿ ಮತ್ತು ಶಂಶೀರ್ ಮಾಲಕತ್ವದಲ್ಲಿರುವ ಈ ತಂಡ, ಗಗನ್ ಮಾರ್ಗದರ್ಶನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತು.
ವಿಜಯಿ ತಂಡದಲ್ಲಿ ಶಂಶೀರ್, ಜುನೈದಾ, ಧೀರಜ್, ಮಿನ್ನಾ, ಆಬಿದ್, ಕುಮಾರ್, ಕೀರ್ತನಾ, ಸುರೇಶ್, ಸತೀಶ್, ದೇವಾಡಿಗ, ಗಗನ್, ಪೂರ್ಣ, ಪ್ರಮೋದ್ ಕೆ.ಎಂ., ಮತ್ತು ಸುನೀಲ್ ಕೆ.ಎಸ್. ಇದ್ದರು.
Next Story




