ಭಾರತೀಯ ಸ್ತ್ರೀಯರ ಫುಟ್ಬಾಲ್ ತಂಡಕ್ಕೆ ವಲ್ಲರೀ ಪೆಜತ್ತಾಯ ಫಿಸಿಯೊ ಆಗಿ ಆಯ್ಕೆ

ಉಡುಪಿ, ಜು.23: 20ರೊಳಗಿನ ಹರೆಯದ ಭಾರತೀಯ ಸ್ತ್ರೀಯರ ಫುಟ್ಬಾಲ್ ತಂಡವು ಏಷ್ಯಾ ಕಪ್ ಪೂರ್ವ ಸಿದ್ಧತೆಗಾಗಿ ಬೆಂಗಳೂರಿನ ತರಬೇತಿ ಶಿಬಿರದಿಂದ ಉಜ್ಬೇಕಿಸ್ತಾನಕ್ಕೆ ಪಯಣಿಸಿದ್ದು ಈ ತಂಡಕ್ಕೆ ಉಡುಪಿ ಮೂಲದ ವಲ್ಲರೀ ಪೆಜತ್ತಾಯ ರಾವ್ ದೈಹಿಕಕ್ಷಮತಾ ತಜ್ಞರಾಗಿ(ಫಿಸಿಯೊ) ಆಗಿ ಆಯ್ಕೆಯಾಗಿದ್ದಾರೆ.
ಮುಂದಿನ ವರ್ಷ 2026ರಲ್ಲಿ ಥೈಲ್ಯಾಂಡಿನಲ್ಲಿ ಜರಗಲಿರುವ ಏಷಿಯಾ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅರ್ಹತೆ ಗಳಿಸಲು ಭಾರತೀಯ ಸ್ತ್ರೀಯರ ತಂಡವು ಆಗಸ್ಟ್ ತಿಂಗಳಲ್ಲಿ ಮ್ಯಾನ್ಮಾರನಲ್ಲಿ ನಡೆಯಲಿರುವ ಅರ್ಹತಾ ಪಂದ್ಯದಲ್ಲಿ ಉತ್ಕೃಷ್ಟ ಪ್ರದರ್ಶನವನ್ನು ನೀಡಬೇಕಾದ ಅನಿವಾರ್ಯತೆ ಇದ್ದು, ಈ ಪ್ರಯುಕ್ತ ತಂಡವು ಹೆಚ್ಚಿನ ಗುಣಮಟ್ಟದ ತರಬೇತಿ, ದೈಹಿಕಕ್ಷಮತೆ, ಕೌಶಲ್ಯಹಾಗೂ ತಂತ್ರಗಾರಿಕೆ ಒಳಗೊಂಡಂತೆ ಸರ್ವಸಿದ್ಧತೆಗಾಗಿ ಉಜ್ಬೇಕಿಸ್ತಾನದ ತಾಷ್ಕೆಂಟನಲ್ಲಿ ಈಗಾಗಲೇ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವಾದಿರಾಜ ಹಾಗೂ ಸಹನಾ ಪೆಜತ್ತಾಯರ ಸುಪುತ್ರಿ ಮತ್ತು ಡಾ.ವಿಶಾಕ್ ರಾವ್ ಪತ್ನಿ ವಲ್ಲರಿ ಪೆಜತ್ತಾಯ ರಾವ್ ಈ ಫುಟ್ಬಾಲ್ ತಂಡದ ಫಿಸಿಯೊ ಆಗಿ ತಂಡದ ಜೊತೆಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.





